ಇವರು ಕವಿತಾ ರೈ. ಮಡಿಕೇರಿಯ ಬಿ.ಎಸ್. ರಂಗನಾಥ್ ರೈ ಮತ್ತು ಬಿ.ಎಲ್. ರಾಧಾ ರೈ ದಂಪತಿಯ ಪುತ್ರಿ.
ಮಡಿಕೇರಿಯ ಸಂತ ಮೈಕಲರ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣ ಮತ್ತು ಪ್ರೌಢಶಿಕ್ಷಣವನ್ನು ಮುಗಿಸಿದ್ದಾರೆ. ನಂತರ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿ.ಎ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಡೆದರು. ಮುಂದೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ ಎ ಪದವಿಯನ್ನು ತೃತಿಯ ಶ್ರೇಣಿಯಲ್ಲಿ ಪಡೆದರು. ನಂತರ ಮಹಿಳೆ: ಅಸ್ತಿತ್ವದ ಸಂಕಥನ ಸಂಶೋಧನೆಗಾಗಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿ.ಹೆಚ್ಡಿ ಪದವಿಯನ್ನು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಡೆದಿದ್ದಾರೆ. ೨೦೧೨ ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ನೇಮಕಗೊಳ್ಳುವ ಮುನ್ನ ಮಂಗಳೂರು ವಿ.ವಿಯ ಮಕ್ಕಳ ಗಂಗೋತ್ರಿಯ ಕನ್ನಡ ಅಧ್ಯಯನ ವಿಭಾಗದಲ್ಲಿ ಅತಿಥಿ ಸಹಾಯಕ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಪ್ರೊ, ಕವಿತಾ ರೈ ೨೦೧೫ ರಿಂದ ಪ್ರಾಧ್ಯಾಪಕರಾಗಿ ಬಡ್ತಿ ಪಡೆದಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪರೀಕ್ಷಾಂಗ ಕುಲಸಚಿವರಾಗಿ ೧೫ ತಿಂಗಳು ಕರ್ತವ್ಯ ನಿರ್ವಹಿಸಿದ ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರಾಗಿ ಎರಡು ವರ್ಷಗಳ ಅನುಭವಗಳಿಸಿದ್ದಾರೆ. ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ ಮೂರು ವರ್ಷದ ಸೇವೆ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಇರುವ ಅಕ್ಕಮಹಾದೇವಿ ಪೀಠದ ಗೌರವ ನಿರ್ದೇಶಕರಾಗಿಯೂ ಐದು ವರ್ಷ ಸೇವೆ ಸಲ್ಲಿಸಿದ್ದಾರೆ. ಇವರು, ಮಹಿಳೆ: ಅಸ್ತಿತ್ವದ ಸಂಕಥನ, ಅರಿವಿನ ನಡೆ, ವಿವಾಹ ಮತ್ತು ಕುಟುಂಬ, ನವವಿಸರ್ಗ, ಭಾರತೀಯ ಕುಟುಂಬ ಪರಿಕಲ್ಪನೆ. ಮಹಿಳೆ: ವಸಾಹತೋತ್ತರ ಸಂದರ್ಭ, ಆಧುನಿಕ ಮಹಿಳಾ ಚರಿತ್ರೆಯ ರೂಪಣೆ, ತಿಳಿಯಲು ಎರಡೆಂಬುವುದಿಲ್ಲ, ಕಥನ ರಾಜಕಾರಣ, ಆಧುನಿಕ ಮಹಿಳೆ: ಚರಿತ್ರೆ ಮತ್ತು ವರ್ತಮಾನಗಳ ಮುಖಾಮುಖಿ, ಕಾವ್ಯತತ್ತಾ÷್ವನುಸಂಧಾನ: ಭಾರತೀಯ ಮತ್ತು ಪಾಶ್ಚಾತ್ಯ ಮೀಮಾಂಸೆಗಳ ಸಮಗ್ರ ಟಿಪ್ಪಣಿಗಳು, ಕೃತಿಗಳನ್ನು ಮಾಡಿದ್ದಾರೆ.
ಹಕ್ಕಿ ಹರಿವ ನೀರು,, ನೀರ ತೇರು, ನೀರ ತೇಜಿಯನೇರಿ, ನೀರು ಮಾಡು.ಕವನ ಸಂಕಲನಗಳು. ಲೋಕಾಮುದ್ರಾ ನಾಡ ಒಡನಾಡಿ: ದೇವರಾಜ ಅರಸು ಜನ್ಮ ಶತಮಾನೋತ್ಸವ ಅಂಗವಾಗಿ ರಚನೆಗೊಂಡ ನಾಟಕ, ಮಂಡ್ಯ ರಮೇಶ್ ಅವರ ನಿರ್ದೇಶನದಲ್ಲಿ ಕರ್ನಾಟಕದಾದ್ಯಂತ ಹಲವು ಪ್ರದರ್ಶನಗಳನ್ನು ಕಂಡಿದೆ. ಕೊಡಗಿನ ಶತಮಾನದ ಕಾವ್ಯ, ಧರಣಿ ಹೆಜ್ಜೆಯ ಸದ್ದು, ವಿದ್ವತ್ ಕಲಾಚತುರ ಜಿ.ಎಸ್. ಭಟ್ಟ, ವಚನ-ನಿರ್ವಚನ (ಅಕ್ಕಮಹಾದೇವಿಯ ವಚನಗಳ ವಿಮರ್ಶೆಗಳ ಆಯ್ದ ಸಂಕಲನ, ಸಂಪಾದಿತ ಕೃತಿಗಳು, ನಾಟಿಓಟ-ಕೊಡಗಿನ ಕತೆಗಳು, ಹೀಗೆ ಹನ್ನೊಂದು ವಿಮರ್ಶೆ ಮತ್ತು ಸಂಶೋಧನೆಗೆ ಸಂಬAಧಿಸಿದ ಕೃತಿಗಳು, ನಾಲ್ಕು ಕವನ ಸಂಕಲನಗಳು, ಎರಡು ನಾಟಕಗಳು, ನಾಲ್ಕು ಸಂಪಾದನಾ ಕೃತಿ, ಹಾಗೂ ಒಂದು ಕಥಾ ಸಂಕಲನ ಸೇರಿ ಒಟ್ಟು ಇಪ್ಪತ್ತೆರಡು ಕೃತಿಗಳನ್ನು ರಚಿಸಿ ಲೋಕಾರ್ಪಣೆ ಮಾಡಿದ್ದಾರೆ. ೨೦೧೧ ರಲ್ಲಿ ಇವರ ಲೋಕಾಮುದ್ರಾ ನಾಟಕ ಕೃತಿಯು ತಮಿಳು, ಮಲಯಾಳಂ ಮತ್ತು ಅಸ್ಸಾಂ ಭಾಷೆಗಳಿಗೆ ಅನುವಾದ ಗೊಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಒಳಗೊಂಡು ಹಲವು ಪ್ರಶಸ್ತಿಗಳು ಇವರ ಕೃತಿಗಳಿಗೆ ಲಭಿಸಿವೆ. ಇವರ ಮುಂದಿನ ಬದುಕು ಬರಹಗಳು ಇನ್ನಷ್ಟೂ ಜನಾನುರಾಗಿಯಾಗಲೆಂದು ಹಾರೈಸೋಣ.
-ವೈಲೇಶ, ಪಿ. ಎಸ್. ಕೊಡಗು,
ಮೊ: ೮೮೬೧೪೦೫೭೩೮