*ಗೋಣಿಕೊಪ್ಪ, ಜು. ೧: ಗೋಣಿಕೊಪ್ಪ ರೋಟರಿ ಕ್ಲಬ್ ಕಾರ್ಯಕ್ರಮಗಳಿಗೆ ಚಿನ್ನದ ಪ್ರಶಸ್ತಿ ಲಭಿಸಿದ್ದು, ಮತ್ತಷ್ಟು ಕಾರ್ಯಕ್ರಮಗಳ ಮೂಲಕ ಸಾಧನೆ ಮುಂದುವರಿಸಲಾಗುವುದು ಎಂದು ರೋಟರಿ ಕ್ಲಬ್ ವ್ಯಸನಮುಕ್ತ ಯೋಜನೆ ಅಧ್ಯಕ್ಷ ಡಾ. ಕೆ. ಎನ್. ಚಂದ್ರಶೇಖರ್ ಹೇಳಿದರು.

ಆಡಳಿತ ಮಂಡಳಿಗೆ ಆಯ್ಕೆ ನಡೆದಿದೆ. ತಾ. ೪ ರಂದು ಸಭಾಂಗಣದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಪದಗ್ರಹಣ ಅಧಿಕಾರಿಯಾಗಿ ಹಿರಿಯರಾದ ಎನ್. ಪ್ರಕಾಶ್ ಕಾರಂತ್ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ರೋಟರಿ ಸಹಾಯಕ ಗವರ್ನರ್ ಡಿ. ಎಂ. ಕಿರಣ್, ವಲಯ ಲೆಫ್ಟಿನೆಂಟ್ ಡಾ. ಎಂ. ಯು. ಚೆಂಗಪ್ಪ ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೋಟರಿ ಜಿಲ್ಲೆಗೆ (೩೧೮೧) ೯ನೇ ವಾರ್ಷಿಕೋತ್ಸವ ಪ್ರಯುಕ್ತ ೯ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಮುಂದಾಗಿ ದ್ದೇವೆ. ವಿದ್ಯಾರ್ಥಿಗಳಲ್ಲಿ ವ್ಯಸನಮುಕ್ತವಾಗಿ ಬದುಕು ಸಾಗಿಸಲು ವ್ಯಸನಮುಕ್ತ ಯೋಜನೆ ಅಭಿಯಾನ ಆರಂಭಿಸಲಾಗುವುದು ಎಂದರು.

ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷ ಅರುಣ್ ತಮ್ಮಯ್ಯ ಮಾತನಾಡಿ, ಒಂದು ವರ್ಷದಲ್ಲಿ ೩೦ ಕಾರ್ಯಕ್ರಮಗಳ ಮೂಲಕ ಗೋಲ್ಡ್ ಪ್ರಶಸ್ತಿ ಪಡೆದುಕೊಳ್ಳಲಾಗಿದೆ. ಗೋಣಿಕೊಪ್ಪದಿಂದ ಆನೆಚೌಕೂರು ಗಡಿವರೆಗೂ ಸತತವಾಗಿ ೩ ತಿಂಗಳು ಸ್ವಚ್ಚತೆ ಕಾರ್ಯಕ್ರಮದ ಮೂಲಕ ಕಸಮುಕ್ತ ಅಭಿಯಾನದ ಜಾಗೃತಿ ಮೂಡಿಸಲಾಗಿದೆ. ಶಾಲೆಗಳಿಗೆ ಅಗತ್ಯ ವಸ್ತುಗಳ ಕೊಡುಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ ಎಂದರು.

ಗೋಣಿಕೊಪ್ಪ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷೆ ಚೇಂದAಡ ಸುಮಿ ಸುಬ್ಬಯ್ಯ ಮಾತನಾಡಿ, ಮತ್ತಷ್ಟು ಕಾರ್ಯಕ್ರಮಗಳ ಮೂಲಕ ಸಾಧನೆಯನ್ನು ಉಳಿಸಿಕೊಳ್ಳುವ ಉದ್ದೇಶವಿದೆ. ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕಾರ್ಯಕ್ರಮ ರೂಪಿಸಲಾಗುವುದು ಎಂದರು. ಕಾರ್ಯದರ್ಶಿಯಾಗಿ ಪಿ. ಆರ್. ವಿಜಯ್ ಇದ್ದರು.