ಮಡಿಕೇರಿ, ಜೂ. ೩೦: ಮಡಿಕೇರಿಯಲ್ಲಿ ಶ್ರೀ ರಾಜೇಶ್ವರಿ ವಿದ್ಯಾಲಯ ವತಿಯಿಂದ ಎಸ್.ಆರ್.ವಿ. ಫುಟ್ಬಾಲ್ ಕಪ್ ಪ್ರಪ್ರಥಮ ಬಾರಿಗೆ ಹೊನಲು ಬೆಳಕಿನ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯವು ಜುಲೈ ೭ ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯಲಿದೆ.

ಮಡಿಕೇರಿ ನಗರದ ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿದ್ದು, ಒಟ್ಟು ಹತ್ತು ಮಾಲೀಕತ್ವದ ಹತ್ತು ತಂಡಗಳು ಪಾಲ್ಗೊಳ್ಳಲಿದೆ. (ಬೆಂಜಿ ಫುಟ್ಬಾಲ್ ಕ್ಲಬ್, ದಿ ರೆಡ್ ಡೆವಿಲ್ಸ್, ಟೀಮ್ ಭಗವತಿ, ಕೂರ್ಗ್ ಚಾಮರ್ಸ್, ಟೀಮ್ ಒನ್ ಟಚ್, ಟೀಮ್ ಬ್ರದರ್ಸ್, ವೆಸ್ಟನ್, ವೈಲ್ಡ್ ಮಾಸ್ಟರ್ಸ್, ಟೀಮ್ ಲೆಜೆಂಡ್ಸ್, ಹಾಗೂ ಕೆ.ಎಂ. ಯುನೈಟೆಡ್ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ಪಂದ್ಯಾಟದ ವಿನ್ನರ್ಸ್ ತಂಡಕ್ಕೆ ೨೫೦೦೦ ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ತಂಡಕ್ಕೆ ೧೫೦೦೦ ನಗದು ಹಾಗೂ ಟ್ರೋಫಿ ಮತ್ತು ವೈಯಕ್ತಿಕ ಟ್ರೋಫಿಗಳು ಕೂಡ ಕ್ರೀಡಾಪಟುಗಳಿಗೆ ಸಿಗಲಿದೆ.

ಕ್ರೀಡಾಕೂಟದ ಪ್ರಮುಖವಾಗಿ ಎಂ.ಸಿ.ಸಿ. ಲೆಜೆಂಡ್ಸ್ ಹಾಗೂ ಕೊಡಗು ಪತ್ರಕರ್ತರ ನಡುವೆ ಪ್ರದರ್ಶನ ಪಂದ್ಯವು ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೭೨೫೯೫೦೦೩೭೭, ೮೯೭೧೫೬೩೨೪೬, ೯೫೩೮೧೫೬೬೬೩, ೯೯೦೨೯೬೪೩೯೮ ಸಂಪರ್ಕಿಸಬಹುದು.