ಮಡಿಕೇರಿ, ಜೂ. ೩೦: ಆಧುನೀಕರಣ, ಡಿಜಿಟಲೀಕರಣದ ಭರಾಟೆಯಲ್ಲಿ ಸಂಪ್ರದಾಯ ಸಂಸ್ಕೃತಿ ಗಳು ಹಳೆಯ ಗೊಡ್ಡು ಅನುಸರಣೆ ಎಂಬ ಭಾವನೆಗಳು ರಾಷ್ಟçದಲ್ಲಿ ಮಿತಿ ಮೀರುತ್ತಿದೆ. ತಮ್ಮ ಬೆವರಿಳಿಸಿ ತಮ್ಮ ಸುಖವನ್ನು ತ್ಯಾಗಮಾಡಿ ಮಕ್ಕಳು ಅತ್ಯುನ್ನತ ಶಿಕ್ಷಣ ಪಡೆಯಲಿ ಎಂದು ಹಗಲಿರುಳೂ ದುಡಿಯುವ ಪೋಷಕ ರಿಗೆ ಅವರು ವಯೋವೃದ್ಧರಾದಾಗ ಆಸರೆಯೇ ಇಲ್ಲದಂತಹ ದುಸ್ಥಿತಿ ಹೆಚ್ಚುತ್ತಿದೆ. ತಮ್ಮನ್ನು ಉತ್ತಮ ಸ್ಥಿತಿಗೆ ತಂದ ಪೋಷಕರ ಪರಿಶ್ರಮವನ್ನು ಅನೇಕ ಮಕ್ಕಳು ಮರೆತು ನಿರ್ಲಕ್ಷö್ಯ ಮಾಡುವಂತಹ ಪ್ರೀತಿರಹಿತ ಯಾಂತ್ರಿಕ ಬದುಕು ಹಲವಾರು ಕುಟುಂಬಗಳಲ್ಲಿ ಕಂಡುಬರುತ್ತಿದೆ. ಇದರಿಂದಾಗಿ ಮುಪ್ಪು ಆವರಿಸಿದಾಗ ಪೋಷಕರು ಸೂಕ್ತ ಆಸರೆ ಇಲ್ಲದೆ ಅಸಹಾಯಕ ಸ್ಥಿತಿ ಎದುರಿಸುತ್ತಿರುವ ಪ್ರಕರಣಗಳು ಇದೀಗ ಸಾಮಾನ್ಯ ವಿದ್ಯಮಾನವೆನಿಸುತ್ತಿದೆ. ಇಂತಹ ಸಂದರ್ಭ ಕೊಡಗಿನಲ್ಲಿ ಇದೀಗ ಕೆಲವೊಂದು ಖಾಸಗಿ ವಲಯದಲ್ಲಿ ವೃದ್ಧಾಶ್ರಮಗಳು ಆಶ್ರಯತಾಣಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಇದಕ್ಕೆ ಪೂರಕ ವೆಂಬAತೆ ವ್ಯವಸ್ಥಿತ ರೀತಿಯಲ್ಲಿ ಕೊಡ ಗಿನ ವಯೋವೃದ್ಧರಿಗೆ ಸಮರ್ಪಕ ಆಶ್ರಯತಾಣವೊಂದನ್ನು ನಿರ್ಮಿಸಲು ಪ್ರಮುಖ ವ್ಯಕ್ತಿಯೊಬ್ಬರು ಪಣತೊಟ್ಟಿದ್ದಾರೆ.

ಮಾಜಿ ಶಾಸಕರು ಹಾಗೂ ಮಾಜಿ ಸಚಿವರಾದ ಮಂಡೇಪAಡ ಪಿ. ಅಪ್ಪಚ್ಚು ರಂಜನ್ ಅವರು ಈ ದಿಸೆ ಯಲ್ಲಿ ಈಗಾಗಲೇ ಕಾರ್ಯೋನ್ಮುರಾ ಗಿದ್ದಾರೆ. ‘ಶಕ್ತಿ’ ಅವರನ್ನು ಸಂದರ್ಶಿಸಿ ದಾಗ ಈ ಮಾಹಿತಿ ಹೊರಬಿದ್ದಿದ್ದು ವಿವರ ಈ ಕೆಳಗಿನಂತಿದೆ.

ಏಳನೇ ಹೊಸಕೋಟೆ ಪಂಚಾ ಯಿತಿ ವ್ಯಾಪ್ತಿಯಲ್ಲಿ ಮುಖ್ಯರಸ್ತೆಗೆ ಸನಿಹದಲ್ಲಿಯೇ ಸುಮಾರು ಅರ್ಧ ಎಕರೆ ಜಾಗದಲ್ಲಿ ರಂಜನ್ ಅವರು ವೃದ್ಧಾಶ್ರಮಕ್ಕೆ ಅಗತ್ಯವಾದ ಕಟ್ಟಡವನ್ನು ನಿರ್ಮಿಸುತ್ತಿದ್ದು, ಇನ್ನು ೩ ತಿಂಗಳಿ ನಲ್ಲಿಯೇ ಈ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿರುವುದಾಗಿ ತಿಳಿಸಿದ್ದಾರೆ. ಏಳನೇ ಹೊಸಕೋಟೆ ಪ್ರಾಥಮಿಕ ಶಾಲೆ ಸನಿಹ ಮುಖ್ಯ ರಸ್ತೆಯಿಂದ ೩೦೦ ಮೀಟರ್ ಅಂತರದಲ್ಲಿ ಈ ಕಾರ್ಯ ನಡೆಯುತ್ತಿದೆ. ಸುಮಾರು ೭೦೦೦ ಚದರ ಅಡಿ ವಿಸ್ತಾರದ ಕಟ್ಟಡ ನಿರ್ಮಾಣ ಗೊಳ್ಳುತ್ತಿದೆ. ಈ ಕಟ್ಟಡದಲ್ಲಿ ಕಚೇರಿ ಗಾಗಿ ಒಂದು ಕೋಣೆ ಇರುತ್ತದೆ. ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕವಾದ ವಸತಿ ನಿಲಯವನ್ನು ಕಲ್ಪಿಸಲಾಗುತ್ತಿದೆ. ಎರಡು ವಸತಿ ನಿಲಯಗಳಲ್ಲಿಯೂ ಪ್ರತ್ಯೇಕವಾದ ಸ್ನಾನದ ಕೊಠಡಿಗಳು ಹಾಗೂ ಶೌಚಾಲಯಗಳನ್ನು ಒದಗಿಸಲಾಗು ತ್ತದೆ. ಮಹಿಳಾ ಮತ್ತು ಪುರುಷ ವಸತಿ ನಿಲಯಗಳಲ್ಲಿ ತಲಾ ೨೦ ಮಂದಿ ಯಂತೆ ಒಟ್ಟು ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ೪೦ ಮಂದಿಗೆ ಉಳಿಯಲು ಅವಕಾಶವಿದೆ. ಪ್ರತಿಯೊಬ್ಬರಿಗೂ ಮಂಚದ ವ್ಯವಸ್ಥೆಯೊಂದಿಗೆ ಹಾಸಿಗೆಗಳನ್ನು ನೀಡಲಾಗುವುದು. ಅಲ್ಲದೆ ವಸ್ತುಗಳನ್ನು ಇರಿಸಿಕೊಳ್ಳಲು ವಾರ್ಡ್ರೋಬ್ ಇತ್ಯಾದಿಗಳನ್ನು ವ್ಯವಸ್ಥೆಗೊಳಿಸಲಾಗುವುದು. ಸೂಕ್ತ ಆಧುನೀಕೃತ ವ್ಯವಸ್ಥೆಯೊಂದಿಗೆ ಅಡುಗೆ ಕೋಣೆಯನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಸೇರ್ಪಡೆಗೊಳ್ಳುವ ವಯೋವೃದ್ಧ ರಿಗೆ ಉತ್ತಮವಾದ ಆಹಾರ ವ್ಯವಸ್ಥೆ ಯನ್ನು ಒದಗಿಸಲಾಗುತ್ತದೆ. ಇಬ್ಬರು ಅಡುಗೆ ತಯಾರಕರನ್ನು ನೇಮಿಸಲಾಗುತ್ತದೆ. ಸಸ್ಯಾಹಾರದೊಂದಿಗೆ ಅಗತ್ಯವಿರುವವರಿಗೆ ವಾರದಲ್ಲಿ ಎರಡು ದಿನ ಮಾಂಸಾಹಾರವನ್ನು ನೀಡಲಾಗುವುದು. ತುರ್ತು ಅನಾರೋಗ್ಯ ಚಿಕಿತ್ಸೆಗಾಗಿ ನರ್ಸಿಂಗ್ ವ್ಯವಸ್ಥೆಯನ್ನು ಮಾಡಲಾಗುತ್ತದೆ. ವೃದ್ಧರ ರಕ್ಷಣೆಗಾಗಿ ಹಾಗೂ ಸೇವೆಗಾಗಿ ಸುಮಾರು ೧೦ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ಶುಚಿತ್ವವನ್ನು ಕಾಪಾಡಲು ಕೂಡ ಸಿಬ್ಬಂದಿ ಇರುತ್ತಾರೆ. ಇಷ್ಟೆಲ್ಲಾ ಅನು ಕೂಲವನ್ನು ಕಲ್ಪಿಸುವಾಗ ಈ ವೃದ್ಧರ ಜೀವನ ನಿರ್ವಹಣೆಗೆ ಏನಾದರೂ ಹಣ ಪಡೆಯಲಾಗುತ್ತದೆಯೇ ಎಂಬ ಸಂಶಯ ಮೂಡುವುದು ಸಹಜ. ಅಂತಹ ಯಾವುದೇ ಭಾರವನ್ನು ಈ ವೃದ್ಧರಿಗೆ ಹೇರುವುದಿಲ್ಲ. ಎಲ್ಲವೂ ಉಚಿತ ಎನ್ನುವುದು ರಂಜನ್ ಅವರ ಭರವಸೆಯ ಮಾತಾಗಿದೆ.ಮೋದೀಜಿ ಪ್ರೇರಣೆ

ಸಂದರ್ಶನದ ಮುಂದುವರಿದ ಭಾಗ ಈ ಕೆಳಗಿನಂತಿದೆ.

‘ಶಕ್ತಿ’: ಈ ಒಂದು ಪುಣ್ಯ ಹಾಗೂ ಮಹತ್ಕಾರ್ಯದಲ್ಲಿ ನಿಮಗೆ ಉಂಟಾದ ಪ್ರಮುಖ ಪ್ರೇರಣೆ ಏನು?

ರಂಜನ್: ನಾನು ಪ್ರತಿವರ್ಷವೂ ಪ್ರಧಾನಿ ಮೋದೀಜಿ ಅವರ ಹುಟ್ಟು ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿ ಸುತ್ತಿದ್ದೆ. ಆ ದಿನ ಕೆಲವು ವೃದ್ಧಾಶ್ರಮ ಗಳಿಗೆ ತೆರಳಿ ವಯೋವೃದ್ಧರಿಗೆ ಬಿರಿಯಾನಿ ಊಟವನ್ನು ನೀಡುವುದ ರಲ್ಲಿ ನನಗೆ ತೃಪ್ತಿ ಸಿಗುತ್ತಿತ್ತು. ಇದೀಗ ನಾನೇ ವೃದ್ಧಾಶ್ರಮವನ್ನು ನಡೆಸುವ ಮೂಲಕ ಮೋದೀಜಿ ಅವರ ಹುಟ್ಟು ಹಬ್ಬವನ್ನು ಇನ್ನೂ ವಿಶೇಷವಾಗಿ ಆಚರಣೆ ಮಾಡಲು ಸಾಧ್ಯವಾಗುತ್ತದೆ ಎಂದೆನಿಸಿತು.

‘ಶಕ್ತಿ’: ಇದಲ್ಲದೆ, ನೀವು ಈ ಹಿಂದೆ ವಯೋವೃದ್ಧರಿಗಾಗಿ ಏನಾದರೂ ಕಾರ್ಯ ಕ್ರಮ ನಡೆಸಿದ್ದೀರಾ?

ರಂಜನ್: ಹೌದು ವಿಕಾಸ್ ಜನಸೇವಾ ಟ್ರಸ್ಟ್ ವಯೋವೃದ್ಧರಿಗಾಗಿ ಆಶ್ರಯ ಕಲ್ಪಿಸಿದ್ದು, ಅಲ್ಲಿಗೆ ತೆರಳುತ್ತಿದ್ದೆ. ಅಲ್ಲದೆ ಅವರ ಸೇವಾ ಕಾರ್ಯಕ್ರಮಗಳಿಗೆ ನನ್ನಿಂದಾದ ಧನಸಹಾಯ ನೀಡುತ್ತಿದ್ದೆ. ಆದರೆ ಈಗ ಅದು ಕಾರ್ಯ ನಿರ್ವಹಿಸುತ್ತಿದ್ದರೂ ಅದರ ಪ್ರಮುಖರಾಗಿದ್ದ ರಮೇಶ್ ಅವರ ನಿಧನದ ಬಳಿಕ ನಾನು ಅಲ್ಲಿ ಸಂಪರ್ಕ ಮುಂದುವರೆಸಿಲ್ಲ. ನಾನೇ ಏಕೆ ಕೊಡಗಿನ ಕೆಲವು ಪ್ರಮುಖರ ಸಹಕಾರದೊಂದಿಗೆ ವೃದ್ಧಾಶ್ರಮ ಮಾಡಬಾರದು ಎನ್ನುವ ಪ್ರೇರಣೆ ಸಹಜವಾಗಿ ಉಂಟಾಯಿತು.

‘ಶಕ್ತಿ’: ಈ ವೃದ್ಧಾಶ್ರಮದ ಉಸ್ತುವಾ ರಿಯನ್ನು ನೀವೇ ನಿರ್ವಹಿಸುತ್ತೀರಾ?

ರಂಜನ್: ನಾನು ಕಟ್ಟಡದ ಪೂರ್ಣ ಜವಾಬ್ದಾರಿಕೆಯನ್ನು ನಿರ್ವ ಹಿಸುತ್ತೇನೆ. ಏಕೆಂದರೆ ಈಗಾಗಲೇ ವಿದೇಶದಲ್ಲಿರುವ ನನ್ನ ಪುತ್ರರುಗಳಾದ ಇಂಜಿನಿಯರ್ ವೃತ್ತಿಯಲ್ಲಿರುವ ಪೂವಯ್ಯ ಹಾಗೂ ವೈದ್ಯ ವೃತ್ತಿಯಲ್ಲಿರುವ ಕಾರ್ಯಪ್ಪ ಇವರುಗಳಿಂದಲೂ ಇದಕ್ಕಾಗಿ ಧನಸಹಾಯ ಪಡೆದು ನಿರ್ಮಿಸಲಾಗುತ್ತಿದೆ. ಹೀಗಾಗಿ ಮಕ್ಕಳು ಮತ್ತು ಪತ್ನಿ ಶೈಲಾ ಇವರುಗಳ ಸಹಕಾರವೇ ಅಲ್ಲದೆ ಪುತ್ರಿ ವಿದೇಶದಲ್ಲಿರುವ ಕ್ಷೀರಳ ಸಕಾಲಿಕ ಸಲಹೆಗಳೊಂದಿಗೆ ಕಟ್ಟಡವು ಸಮರ್ಪಕವಾಗಿ ನಿರ್ಮಾಣ ಗೊಳ್ಳುತ್ತಿದೆ.

‘ಶಕ್ತಿ’: ವೃದ್ಧಾಶ್ರಮ ನಿರ್ವಹಣೆಗೆ ಇತರರ ಸಹಕಾರ ಪಡೆಯುತ್ತೀರಾ?

ರಂಜನ್: ಹೌದು, ಒಟ್ಟು ೧೧ ಮಂದಿಯ ಟ್ರಸ್ಟ್ ಅನ್ನು ರಚನೆ ಮಾಡಲಾಗುವುದು. ಇದರಲ್ಲಿ ನಾನು ಮತ್ತು ನನ್ನ ಪತ್ನಿಯೂ ಇರುತ್ತೇವೆ. ಸಾಧ್ಯವಾದರೆ ಓರ್ವ ಪುತ್ರನನ್ನು ಸೇರಿಸಿಕೊಳ್ಳಲಾಗುವುದು. ಟ್ರಸ್ಟ್ ಆಡಳಿತ ಮಂಡಳಿಯಿAದಲೇ ವೃದ್ಧಾ ಶ್ರಮವನ್ನು ನಿರ್ವಹಿಸಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಬೈಲಾವನ್ನು ರಚಿಸಲಾಗುತ್ತದೆ. ಟ್ರಸ್ಟಿಗಳ ಕಾಲಾ ನಂತರದಲ್ಲಿಯೂ ಕೂಡ ವೃದ್ಧಾಶ್ರ ಮವು ಶಾಶ್ವತವಾಗಿ ನಡೆಯಬೇಕು ಎನ್ನುವ ಉದ್ದೇಶವಿರಿಸಿಕೊಳ್ಳಲಾಗಿದೆ. ಅಂತಹ ಸಂದರ್ಭ ಇದರ ನಿರ್ವ ಹಣೆಗೆ ಸರ್ಕಾರದ ಅಧೀನಕ್ಕೆ ವಹಿ ಸುವ ಅವಕಾಶವನ್ನು ಕೂಡ ಬೈಲಾ ದಲ್ಲಿ ಕಲ್ಪಿಸಲಾಗುವುದು. ಇದೆಲ್ಲವನ್ನೂ ಅಧಿಕೃತವಾಗಿ ಟ್ರಸ್ಟ್ ರಚನೆಗೊಂಡ ಬಳಿಕ ಅಳವಡಿಸಲಾಗುತ್ತದೆ.

‘ಶಕ್ತಿ’: ವಯೋವೃದ್ಧರನ್ನು ಆಶ್ರಮಕ್ಕೆ ಸೇರ್ಪಡೆಗೊಳಿಸುವಾಗ ಯಾವ ಮಾನದಂಡವನ್ನು ಪರಿಗಣಿಸಲಾಗುತ್ತದೆ.

ರಂಜನ್: ಅಂತಹವರು ನೈಜವಾಗಿ ಅಸಹಾಯಕರಾಗಿದ್ದಾರಾ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ. ಎಲ್ಲಾ ಜನಾಂಗದವರನ್ನು ಅವರ ಪರಿಸ್ಥಿತಿಯನ್ನು ಪರಿಗಣಿಸಿ ಆಯ್ಕೆ ಮಾಡಲಾಗುವುದು.

ರಾಜಕೀಯದಲ್ಲಿ ಮುಂದುವರಿಕೆ

ಶಕ್ತಿ: ಈ ಎಲ್ಲದರ ನಡುವೆ ಹಾಗೂ ಪ್ರಸಕ್ತ ರಾಜಕೀಯ ಬೆಳವಣಿಗೆಯಲ್ಲಿ ನೀವು ಮುಂದೆಯೂ ರಾಜಕೀಯದಲ್ಲಿ ಕ್ರಿಯಾಶೀಲರಾಗಿರುತ್ತೀರಾ?

ರಂಜನ್: ಖಂಡಿತ, ನಾನು ರಾಜ ಕೀಯ ರಂಗವನ್ನು ತ್ಯಜಿಸುವುದಿಲ್ಲ. ಪ್ರಧಾನಿ ಮೋದಿಯಂತವರು ದೇಶ ಕ್ಕಾಗಿ ತಮ್ಮ ಇಳಿವಯಸ್ಸಿನಲ್ಲಿಯೂ ಕಾರ್ಯೋನ್ಮುಖರಾಗಿರುವಾಗ ಅವರಿಗೆ ಬೆಂಗಾವಲಾಗಿ ನನ್ನಂತಹವರೂ ಕ್ರ‍್ರಿಯಾಶೀಲರಾಗಿರಲೇಬೇಕು. - ಸಂದರ್ಶನ “ಚಕ್ರವರ್ತಿ”