ವೀರಾಜಪೇಟೆ, ಜೂ. ೩೦: ಬಸ್ಸನ್ನು ‘ಓವರ್ ಟೇಕ್’ ಮಾಡುವ ಸಂದರ್ಭ ನಿಯಂತ್ರಣ ಕಳೆದುಕೊಂಡ ಬೈಕ್ ಅಪಘಾತವಾಗಿ ಸವಾರ ಗಾಯಗೊಂಡ ಘಟನೆ ಪಟ್ಟಣದ ಕಾವೇರಿ ಕಾಲೇಜು ಬಳಿ ನಡೆದಿದೆ.

ಮೂಲತಃ ಚಿಕ್ಕಮಗಳೂರು ನಿವಾಸಿ, ಬಾಳುಗೋಡಿನ ಹೊಟೇಲ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ನವೀನ್ ಕುಮಾರ್ (೨೭) ಗಾಯಗೊಂಡ ಯುವಕ.

ನವೀನ್ ಕುಮಾರ್ ಬಿಟ್ಟಂಗಾಲ-ಬಾಳುಗೋಡು ರಸ್ತೆಯಲ್ಲಿರುವ ಹೊಟೇಲ್‌ನಲ್ಲಿ ಕಳೆದ ನಾಲ್ಕು ತಿಂಗಳಿನಿAದ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಇಂದು ಸುಮಾರು ಮಧ್ಯಾಹ್ನ ೧೨ ಗಂಟೆ ಸಮಯದಲ್ಲಿ ಮಾಲೀಕರು ವೀರಾಜಪೇಟೆಯಿಂದ ವಸ್ತುಗಳನ್ನು ಖರೀದಿಸಿ ತರುವಂತೆ ತಿಳಿಸಿದ್ದರು. ನವೀನ್ ಹೊಂಡಾ ಆ್ಯಕ್ಟಿವಾದಲ್ಲಿ ತೆರಳಿ ವಸ್ತು ಖರೀದಿಸಿ ಹಿಂದಿರುಗುವ ವೇಳೆ ಕಾವೇರಿ ಕಾಲೇಜು ಮುಂಭಾಗದಲ್ಲಿ ಬಸ್ಸನ್ನು ಹಿಂದಿಕ್ಕುವ ಸಮಯದಲ್ಲಿ ಬೈಕ್ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಯುವಕ ರಸ್ತೆಯ ಬದಿಯಲ್ಲಿ ಬಿದ್ದಿದ್ದಾನೆ. ಪರಿಣಾಮ ತಲೆ ಭಾಗಕ್ಕೆ ಗಾಯವಾಗಿದ್ದು, ಸಾರ್ವಜನಿಕರು ಗಾಯಾಳುವನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.