ವೀರಾಜಪೇಟೆ, ಜೂ. ೨೯: ಅಂರ್ರಾಜ್ಯ ಲಾರಿಯೊಂದು ವೀರಾಜಪೇಟೆ ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿದ್ದ ವೇಳೆ ಅವಘಡಕ್ಕೀಡಾಗಿ ಲಾರಿ ನಿರ್ವಾಹಕ ಸ್ಥಳದಲ್ಲೇ ಸಾವನ್ನಪ್ಪಿ, ಚಾಲಕನ ಕಾಲು ಮತ್ತು ಕೈ ಮುರಿತಕ್ಕೊಳಗಾದ ಘಟನೆ ಮಾಕುಟ್ಟ ವಾಟೆಕೊಲ್ಲಿ ಎಂಬಲ್ಲಿ ನಡೆದಿದೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವೆಂಕಟ್ರಾವ್ (೬೦) ಮೃತ ವ್ಯಕ್ತಿ. ಭರತ್ (೩೮) ಗಂಭೀರ ಗಾಯಗೊಂಡು ಇರಿಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುಂಟೂರು ಜಿಲ್ಲೆಯಿಂದ ಕೇರಳದ ಕ್ಯಾಲಿಕಟ್ಗೆ ಲಾರಿಯಲ್ಲಿ ಕಾಯಿಮೆಣಸು ಸಾಗಿಸಲಾಗುತ್ತಿತ್ತು. ಈ ವೇಳೆ ವಾಟೆಕೊಲ್ಲಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಅವಘಡಕ್ಕೀಡಾಗಿದೆ. ಪರಿಣಾಮ ನಿರ್ವಾಹಕ ವೆಂಕಟ್ರಾವ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಚಾಲಕ ಭರತ್ನ ಬಲಗಾಲು ಹಾಗೂ ಎಡಗೈ ಮೂಳೆ ಮುರಿದಿದೆ.
ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ಕಿಶೋರ್ಕುಮಾರ್ ಶೆಟ್ಟಿ