ಪೊನ್ನಂಪೇಟೆ, ಜೂ. ೨೯: ಖಾಸಗಿ ಬಸ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ೫ ಮಂದಿ ಸಣ್ಣಪುಟ್ಟ ಗಾಯಗ¼ಪಾರಾದ ಘಟನೆ ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದ ಶ್ರೀ ಕುಟ್ಟಿಚಾತ ದೇವಸ್ಥಾನದ ಎದುರಿನ ಮುಖ್ಯರಸ್ತೆಯಲ್ಲಿ ಇಂದು ಬೆಳಿಗ್ಗೆ ೮.೩೦ಕ್ಕೆ ನಡೆದಿದೆ. ಪೊನ್ನಂಪೇಟೆಯಿAದ ಬಲ್ಯಮಂಡೂರು ಕಡೆಗೆ ಹೋಗುತ್ತಿದ್ದ ಆಲ್ಟೊ ಕಾರು ವಾಹನವೊಂದನ್ನು ಓವರ್ ಟೇಕ್ ಮಾಡುವ ಸಂದರ್ಭ ಕಾನೂರಿನಿಂದ ಪೊನ್ನಂಪೇಟೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊAಡಿದ್ದು, ಬಸ್‌ಗೂ ಹಾನಿಯಾಗಿದೆ. ಕೈಕೇರಿ ನಿವಾಸಿ ಲಕ್ಷö್ಮಣ ಎಂಬವರಿಗೆ ಸೇರಿದ ಕಾರಿನಲ್ಲಿ ೫ ಮಂದಿ ಪ್ರಯಾಣಿಸುತ್ತಿದ್ದು ಚಾಲಕ ಲಕ್ಷö್ಮಣ ಹಾಗೂ ವಿವೇಕ್, ಮುನ್ನ, ಮುನಿಸ್, ರತ್ನ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳಿಗೆ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

ಘಟನಾ ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ನವೀನ್, ಅಪರಾಧ ವಿಭಾಗ ಉಪ ನಿರೀಕ್ಷಕ ಸುಬ್ರಮಣಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ೆÆAದಿಗೆ