ಕುಶಾಲನಗರ, ಜೂ.೨೯: ಮೈಸೂರು ಜಿಲ್ಲಾ ಪೊಲೀಸರಿಂದ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ಜುಲೈ ಒಂದರಿAದ ಶಾಕ್ ಕಾದಿದೆ.
ಕುಶಾಲನಗರ ಗಡಿ ಭಾಗದಿಂದ ಮೈಸೂರು ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳನ್ನು ಗುರುತಿಸುವ ಸಲುವಾಗಿ ಹೆದ್ದಾರಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಕ್ಯಾಮರಗಳನ್ನು ಅಳವಡಿಸಲಾಗಿದೆ. ದಿನ ಕ್ಯಾಮರಗಳಲ್ಲಿ ಸೆರೆಯಾಗುವ ದೃಶ್ಯಗಳು ನೇರವಾಗಿ ಮೈಸೂರು ಕೇಂದ್ರ ಪೊಲೀಸ್ ಕಚೇರಿಯಲ್ಲಿ ದಾಖಲಾಗುತ್ತವೆ.
ಕುಶಾಲನಗರ ಸಮೀಪದ ಕೊಪ್ಪ ಮೈಸೂರು ಹೆದ್ದಾರಿ ವ್ಯಾಪ್ತಿಯ ೨೩ ಸ್ಥಳಗಳಲ್ಲಿ ಒಟ್ಟು ೫೦ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಾರ್ಯಾಲಯ ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯ ಬಹುತೇಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ ಸಂಭವಿಸುತ್ತಿದ್ದು ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಈ ವಿಶೇಷ ಯೋಜನೆ ಹಮ್ಮಿಕೊಳ್ಳಲಾಗಿದೆ.
ಜುಲೈ ೧ರಿಂದ ಈ ಆರಂಭವಾಗಲಿದೆ. ಸಂಚಾರ ನಿಯಮಗಳ ಉಲ್ಲಂಘನೆ ಹೆಲ್ಮೆಟ್ ಧರಿಸದೆ ಚಲಿಸುವುದು, ಟ್ರಿಪಲ್ ರೈಡಿಂಗ್, ಸೀಟ್ ಬೆಲ್ಟ್ ಧರಿಸದಿರುವುದು ವಾಹನ ಚಾಲನೆಯಲ್ಲಿ ಮೊಬೈಲ್ ಬಳಕೆ ಮಾಡುವವರ ವಿರುದ್ಧ ಪ್ರಕರಣಗಳು ದಾಖಲಾಗಿ ದಂಡ ವಿಧಿಸಲಾಗುತ್ತದೆ.
ಪ್ರಕರಣ ದಾಖಲಾದ ಮಾಹಿತಿ ಸಂಬAಧಿಸಿದ ವಾಹನದ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ರವಾನೆಯಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನದ ಮಾಲೀಕರು, ಚಾಲಕರು ಆನ್ಲೈನ್ ಮೂಲಕ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದಂಡವನ್ನು ಕೂಡಲೇ ಪಾವತಿ ಮಾಡಬೇಕಾಗುತ್ತದೆ.
ಕುಶಾಲನಗರ ಸಮೀಪ ಕೊಪ್ಪ ಗಡಿಭಾಗದಲ್ಲಿ ಈಗಾಗಲೇ ಕ್ಯಾಮೆರಾ ಅಳವಡಿಸಲಾಗಿದೆ. ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಉಲ್ಲಂಘಿಸದೆ ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದು ಹಾಗೂ ಅಪರಾಧಗಳನ್ನು ತಡೆಗಟ್ಟಲು ಸಹಕರಿಸಬೇಕೆಂದು ಮೈಸೂರು ಎಸ್ಪಿ ಸೀಮಾಲಾಟ್ಕರ್ ಕೋರಿದ್ದಾರೆ. -ಚಂದ್ರಮೋಹನ್