ವೀರಾಜಪೇಟೆ, ಜೂ. ೨೯ : ಅವಿವಾಹಿತನಾಗಿದ್ದ ಯುವಕನೋರ್ವ ನೇಣಿಗೆ ಶರಣಾದ ಘಟನೆ ನಗರದ ಮಲೆತಿರಿಕೆ ಬೆಟ್ಟದಲ್ಲಿ ನಡೆದಿದೆ. ಮಲೆತಿರಿಕೆ ಬೆಟ್ಟದ ನಿವಾಸಿ ವೆಂಕಪ್ಪ ಎಂಬವರ ದ್ವಿತೀಯ ಪುತ್ರ ಜನಾರ್ಧನ ಅಲಿಯಾಸ್ ಕುಟ್ಟ (೩೬) ನೇಣಿಗೆ ಶರಣಾದ ವ್ಯಕ್ತಿ. ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಕೋಣೆಯೊಂದರ ಮೇಲ್ಚಾವಣಿಯ ರಾಡಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.