ಸುಂಟಿಕೊಪ್ಪ,ಜೂ.೨೯: ಮಾದಾಪುರ ನಂದಿಮೊಟ್ಟೆ ಬಳಿಯ ಯುವಕನರ‍್ವ ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಪೊಲೀಸರು ಧಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸುಂಟಿಕೊಪ್ಪ ಮತ್ತು ಕುಶಾಲನಗರ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ನಿವಾಸಿಯಾಗಿದ್ದು, ಮಾದಾಪುರದ ನಂದಿಮೊಟ್ಟೆಯಲ್ಲಿ ನೆಲೆಸಿರುವ ತೋಮಿಜುದ್ದೀನ್ ಆಲಿಯಾಸ್ ಅನ್ವರ್ ಹುಸೈನ್ (೨೩) ಎಂಬಾತನನ್ನು ಸುಂಟಿಕೊಪ್ಪದ ಉಲುಗುಲಿ ತೋಟದ ಬಳಿಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಬಂಧಿಸಲಾಗಿದ್ದು, ಆರೋಪಿ ವಶದಲ್ಲಿದ್ದ ಅಂದಾಜು ರೂ. ೩೦,೦೦೦ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಎಎಸ್‌ಪಿ ಸುಂದರ್‌ರಾಜ್ ಮರ‍್ಗರ‍್ಶನದಲ್ಲಿ ಸೋಮವಾರಪೇಟೆ ಡಿವೈಎಸ್‌ಪಿ ಗಂಗಾಧರಪ್ಪ,ಕುಶಾಲನಗರ ಸಿಪಿಐ ರಾಜೇಶ್ ಕೋಟ್ಯಾನ್ ಸೂಚನೆ ಮೇರೆಗೆ ಪ್ರಬಾರ ಠಾಣಾಧಿಕಾರಿ ರಮೇಶ್ ಪೆಡ್ಡಣನವರ್, ಅಪರಾಧ ವಿಭಾಗದ ಪಿಎಸ್‌ಐ ಸ್ವಾಮಿ, ಎಎಸ್‌ಐ ವೆಂಕಟೇಶ್, ಸಿಬ್ಬಂದಿಗಳಾದ ಸತೀಶ್, ಪ್ರಕಾಶ್, ಜೀವನ್, ಪ್ರವೀಣ್, ರಂಜಿತ್, ವೆಂಕಟೇಶ್, ರಮೇಶ್, ಜಗದೀಶ್, ಸೌಮ್ಯ, ಲೀಲಾವತಿ, ಉದಯ, ಕರ‍್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.