ಮಡಿಕೇರಿ, ಜೂ. ೨೯: ದೇವ ಭಾಷೆಗೆ ಸರಿಸಮವಾಗಿ ಕನ್ನಡ ಭಾಷೆಯನ್ನು ನಾಡು ಭಾಷೆಯಾಗಿ ಬೆಳೆಸುವಲ್ಲಿ ಮತ್ತು ವಚನಗಳ ಮೂಲ ಕವೇ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಶರಣರು ನೀಡಿದ ಕೊಡುಗೆಗಳು ಸಾಮಾನ್ಯವಾದುದ್ದಲ್ಲವೆಂದು ಅರ ಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದ್ದಾರೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅರಮೇರಿ ಕಳಂಚೇರಿ ಮಠ ಮತ್ತು ಎಸ್ಎಂಎಸ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಅರಮೇರಿ ಮಠದಲ್ಲಿ ನಡೆದ ಧರ್ಮ ಚಿಂತಾಮಣಿ ಮಹಾಶರಣ ಲಿಂಗೈಕ ಮಾಗನೂರು ಬಸಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಕರ್ನಾಟಕದ ಇತಿಹಾಸದಲ್ಲಿ ೧೨ನೇ ಶತಮಾನವು ಚಿರಸ್ಮರಣೀಯವಾಗಿದ್ದು, ಈ ಶತಮಾನವನ್ನು ಶರಣಯುಗ ವೆಂದು ಕರೆಯುತ್ತಾರೆ. ಶಿವಶರಣರು ವಚನ ಸಾಹಿತ್ಯಸೌಧದ ಮೂಲಕ ನಾಡುನುಡಿಗಾಗಿ ದುಡಿದು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿ ದವರೆಂದು ಹೇಳಿದರು.
ಧ್ವನಿ ಇಲ್ಲದವರ ಧ್ವನಿಯಾಗಿ ಶರ ಣರು ವಚನಗಳನ್ನು ಜನಸಮು ದಾಯಕ್ಕೆ ನೀಡುವುದರ ಮೂಲಕ ತಾರ ತಮ್ಯ ಸಮಾಜವನ್ನು ಸಮಸಮಾಜ ವಾಗಿ ನಿರ್ಮಿಸಲು ಅವಿತರವಾಗಿ ಶ್ರಮಿಸಿದರು. ಶರಣರು ವಚನಗಳನ್ನು ಸುಲಲಿತ ಕನ್ನಡದಲ್ಲಿ ಹೇಳುವ ಮೂಲಕ ಜನಸಾಮಾನ್ಯರ ಬದುಕಿಗೆ ಮಾರ್ಗ ಕಲ್ಪಿಸಿದರು. ಜಾತಿ, ಮತ, ಧರ್ಮ, ಮೇಲು ಕೀಳೆಂಬ ಭಾವನೆ ಯನ್ನು ದೂರ ಮಾಡಿ ಸಮಾಜದಲ್ಲಿ ಎಲ್ಲರೂ ಒಂದಾಗಿ ಬಾಳುವಂತೆ ನೋಡಿಕೊಂಡರು. ಜನರಲ್ಲಿದ್ದ ಮೂಢನಂಬಿಕೆಗಳನ್ನು ದೂರವಾಗಿಸಿ ವಚನಗಳಿಂದಲೇ ಜನಜಾಗೃತಿ ಮೂಡಿಸಿದರು ಎಂದರು.
ಕನ್ನಡ ಭಾಷೆಯ ಬೆಳವಣಿಗೆಗೆ ಶರಣರ ಕೊಡುಗೆ ಎಂಬ ವಿಷಯದ ಕುರಿತು ಸಂತ ಅನ್ನಮ್ಮ ಪದವಿ ಕಾಲೇ ಜಿನ ಉಪನ್ಯಾಸಕಿ ಪ್ರತಿಮಾ ರೈ ಮಾತ ನಾಡಿ, ಸಾಹಿತ್ಯಕ್ಕೆ ಶರಣ ಸಾಹಿತ್ಯದ ಕೊಡುಗೆ ವಿಶ್ವವ್ಯಾಪ್ತಿಯಾಗಿದ್ದು, ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಶರಣರು ವಚನಗಳನ್ನು ರೂಪಿಸಿ ದ್ದಾರೆ. ಅದನ್ನು ಸಮಾಜದ ಮುಂದೆ ಹೇಳುವ ಮೂಲಕ ಮಾನವ ಸಮಾಜ ಬದುಕನ್ನು ಅರ್ಥೈಸಿ ಕೊಳ್ಳುವಂತೆ ಮಾಡ ಲಾಯಿತು. ಸಮಾಜದ ಕೆಳಸ್ಥರದ ಜನರು ಕನ್ನಡ ಭಾಷೆಯ ಮೂಲಕ ವಚನಗಳನ್ನು ಸರಳವಾಗಿ ಅರ್ಥೈಸಿ ಕೊಂಡು ಸುಂದರ ಬದುಕನ್ನು ಕಂಡು ಕೊಳ್ಳಲು ಸಾಧ್ಯವಾಯಿತು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ವನ್ನು ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಶ್ ಪದ್ಮನಾಭ ಉದ್ಘಾಟಿಸಿ ಮಾತನಾಡಿ ದರು. ಶರಣ ತತ್ವವನ್ನು ಜಿಲ್ಲೆಯಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುವುದರ ಮೂಲಕ ಜನಪ್ರಿಯರಾಗಿರುವ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಉಪನ್ಯಾಸಕಿ ಪ್ರತಿಮಾ ರೈ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಕ.ಸಾ.ಪ. ಗೌರವ ಕಾರ್ಯ ದರ್ಶಿ ಎಸ್.ಐ. ಮುನೀರ್ ಅಹ್ಮದ್ ಪ್ರಾಸ್ತಾವಿಕ ನುಡಿಗಳಾಡಿದರು. ಕಸಾಪ ಗೌರವ ಕೋಶಾಧಿಕಾರಿ ಎಸ್.ಎಸ್. ಸಂಪತ್ಕುಮಾರ್, ಮಡಿಕೇರಿ ತಾಲೂಕು ಗೌರವ ಕಾರ್ಯದರ್ಶಿ ಕೆ.ಟಿ. ಬೇಬಿ ಮ್ಯಾಥ್ಯು, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸ್ವಪ್ನ ಸುಬ್ಬಯ್ಯ ಉಪಸ್ಥಿತರಿದ್ದರು.
ಮೂರ್ನಾಡು ಹೋಬಳಿ ಕಸಾಪ ಅಧ್ಯಕ್ಷೆ ಹರಿಣಿ ವಿಜಯ್ ಕಾರ್ಯಕ್ರಮ ನಿರೂಪಿಸಿ, ಎಸ್.ಎಂ.ಎಸ್. ಶಿಕ್ಷಣ ಸಂಸ್ಥೆಯ ಶಿಕ್ಷಕಿ ಸೀಮಾ ಸ್ವಾಗತಿಸಿ, ವಂದಿಸಿ ದರು. ಜಿಲ್ಲಾ ಕಸಾಪ ಗೌರವ ಕಾರ್ಯ ದರ್ಶಿ ರೇವತಿ ರಮೇಶ್ ಸ್ವಾಮೀ ಜಿಯ ಪರಿಚಯ ಮಾಡಿದರು.