ಮಡಿಕೇರಿ, ಜೂ. ೨೬: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವನ್ಯಜೀವಿ ಸಂಘರ್ಷ ತಡೆ ಸಂಬAಧ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಣ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿ ಕೆಲವೊಂದು ಸಲಹೆ ಹಾಗೂ ಬೇಡಿಕೆಗಳನ್ನು ಮುಂದಿಟ್ಟರು.

ಅರಣ್ಯ ಸಚಿವರನ್ನು ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಎ.ಎಸ್. ಪೊನ್ನಣ್ಣ ಅವರು, ಕೊಡಗಿನಲ್ಲಿ ಮಾನವ-ಪ್ರಾಣಿ ಸಂಘರ್ಷಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ರೈಲ್ವೆ ಬ್ಯಾರಿಕೇಡ್ ಅಳವಡಿಸುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಸಮಾಲೋಚಿಸಿದರು.

ಜಿಲ್ಲೆಯ ಹಲವು ಗ್ರಾಮೀಣ ಭಾಗಗಳಲ್ಲಿ ವನ್ಯಜೀವಿ ಹಾವಳಿ ಮಿತಿಮೀರಿದೆ. ತೋಟಗಳಲ್ಲಿ ಆನೆಗಳು ಬೀಡುಬಿಟ್ಟು ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿವೆ. ಹಲವು ವರ್ಷಗಳಿಂದ ಈ ಸಮಸ್ಯೆ ಗಂಭೀರತೆಯನ್ನು ಪಡೆದುಕೊಂಡಿದ್ದು, ಪರಿಹಾರಕ್ಕೆ

(ಮೊದಲ ಪುಟದಿಂದ) ಜನತೆ ತೀವ್ರವಾಗಿ ಒತ್ತಾಯಿಸುತ್ತ ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಉಂಟಾಗಿರುವ ಸಮಸ್ಯೆಗೆ ತ್ವರಿತ ಹಾಗೂ ವೈಜ್ಞಾನಿಕ ಪರಿಹಾರದ ಅಗತ್ಯತೆ ಇದೆ ಎಂದು ಪೊನ್ನಣ್ಣ ಅವರು ಶಾಸಕರ ಗಮನ ಸೆಳೆದರು.

ಆನೆಕಾರಿಡಾರ್‌ಗಳಿಂದಲೇ ಆನೆ ಬರದಂತೆ ಎಚ್ಚರವಹಿಸಬೇಕಾಗಿದೆ. ಈ ಹಿನ್ನೆಲೆ ಆ ಪ್ರದೇಶಗಳಲ್ಲಿ ಅಗತ್ಯ ಕಂದಕ, ರೈಲ್ವೆ ಬ್ಯಾರಿಕೇಡ್ ಸೇರಿದಂತೆ ಇನ್ನಿತರ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ ಅವರು, ಅರಣ್ಯ ಇಲಾಖೆಗೆ ಸಂಬAಧಿಸಿದAತೆ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾವಣೆಗೊಳಿಸುವಂತೆ ಒತ್ತಾಯಿಸಿದರು.

ಅದೇ ರೀತಿ ಅರಣ್ಯ ಇಲಾಖೆಗೆ ಸಂಬAಧಿಸಿದ ನಿಗಮ, ಸಂಸ್ಥೆಗಳಲ್ಲಿ ಕೊಡಗಿನವರಿಗೆ ನಾಮನಿರ್ದೇಶನ ಮಾಡಲು ಅವಕಾಶ ನೀಡುವಂತೆ ಕೋರಿದರು. ಈ ಸಂದರ್ಭ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಆನೆ ಕಾರಿಡಾರ್‌ಗಳಲ್ಲಿ ಅಗತ್ಯ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಪ್ರಸ್ತಾವನೆ ಪಡೆದು ಅಗತ್ಯ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದರು.

ಆನೆಗಳಿಗಾಗಿ ಅರಣ್ಯ ಸೃಷ್ಟಿಯ ಚರ್ಚೆ

ಆನೆಗಳು ಸ್ವಾತಂತ್ರವಾಗಿರಲು ೩ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಪ್ರದೇಶವನ್ನು ಸೃಷ್ಟಿಸುವ ಕುರಿತ ಸಾಧಕ-ಬಾಧಕಗಳನ್ನು ಇದೇ ಸಂದರ್ಭ ಅರಣ್ಯ ಸಚಿವರು-ಶಾಸಕರು ಚರ್ಚಿಸಿದರು. ಕೊಡಗಿನಲ್ಲಿ ಸ್ಥಳವಿದ್ದರೆ ಗುರುತಿಸಿ ಜನಾಭಿಪ್ರಾಯ, ತಜ್ಞರ ಸಲಹೆಗಳನ್ನು ಪಡೆದು ಈ ಬಗ್ಗೆ ಕ್ರಮವಹಿಸುವ ಮಾತುಕತೆ ನಡೆಯಿತು.