ಮಡಿಕೇರಿ, ಜೂ. ೨೭: ಎತ್ತರದ ಕಟ್ಟಡವನ್ನೇರಿದ್ದ ಬೆಕ್ಕಿನ ರಕ್ಷಣೆಗೆ ಅಗ್ನಿ ಶಾಮಕ ದಳದ ತಂಡ ಮುಂದಾದ ಘಟನೆ ನಿನ್ನೆ ನಗರದಲ್ಲಿ ನಡೆದಿದೆ.

ಕಾಲೇಜು ರಸ್ತೆಯಲ್ಲಿರುವ ಸುಮಾರು ೧೦೦ ಅಡಿ ಎತ್ತರದ ಎಸ್‌ಬಿಐ ಬ್ಯಾಂಕ್ ಕಟ್ಟಡದ ಮೇಲೇರಿದ್ದ ಬೆಕ್ಕೊಂದು ಕೆಳಕ್ಕೆ ಬರಲಾಗದೆ ಪರದಾಡುತ್ತಿತ್ತು. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ವಯ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದವರು ಕಟ್ಟಡದ ಮೇಲೇರಿ ಬೆಕ್ಕಿನ ರಕ್ಷಣಾ ಕಾರ್ಯಾಚರಣೆ ಕೈಗೊಂಡರಾದರೂ ಆ ಬೆಕ್ಕು ಕಾರ್ಯಾಚರಣೆ ತಂಡದ ಕೈಗೆ ಸಿಗದೆ ಕಟ್ಟಡದ ಮೇಲಿನಿಂದ ಕೆಳಕ್ಕೆ ಜಿಗಿದು ಪಾರಾಯಿತು.