ಗೋಣಿಕೊಪ್ಪಲು, ಜೂ. ೨೭: ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣನವರ ಸಲಹೆ ಬಿಜೆಪಿ ಪಕ್ಷಕ್ಕೆ ಅಗತ್ಯವಿಲ್ಲ. ಪಕ್ಷ ಇಲ್ಲಿಯ ತನಕ ಹೋರಾಟದಿಂದಲೇ ಮುಂದೆ ಬಂದಿದೆ. ಎಲ್ಲಾವನ್ನು ಕಾನೂನಾತ್ಮಕವಾಗಿ ಎದುರಿಸುವ ಶಕ್ತಿ ಬಿಜೆಪಿಗಿದೆ. ಬಿಜೆಪಿ ಪಕ್ಷ ನಡೆಸಿದ ಪ್ರತಿಭಟನೆಗೆ ಜಾತಿಯ ಬಣ್ಣ ಕಟ್ಟುವ ಮೂಲಕ ರಾಜಕೀಯ ಮಾಡುತ್ತಿರುವುದು ಎಷ್ಟು ಸರಿ.

ಭೂ ಕಬಳಿಕೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ ಎಂದು ಭಾರತೀಯ ಜನತಾ ಪಾರ್ಟಿಯ ಕೊಡಗು ಜಿಲ್ಲಾ ಮಾಜಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ತೀಕ್ಷ÷್ಣ ಪ್ರತಿಕ್ರಿಯೆ ನೀಡಿದ್ದಾರೆ.

ಗೋಣಿಕೊಪ್ಪಲುವಿನ ಬಿಜೆಪಿ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಬಿನ್ ದೇವಯ್ಯ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ಬೆಲೆ ಏರಿಕೆ ನಡೆಯುತ್ತಿದೆ. ಈ ವೇಳೆ ಇದನ್ನು ಖಂಡಿಸಲು ಬಿಜೆಪಿ ಪಕ್ಷದ ವತಿಯಿಂದ ವೀರಾಜಪೇಟೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಆ ಸಂದರ್ಭದಲ್ಲಿ ಶಾಸಕ ಪೊನ್ನಣ್ಣ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಪ್ರಮುಖರ ಪ್ರತಿಕೃತಿ ದಹನ, ಅಣಕು ಶವಯಾತ್ರೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಹೋರಾಟ ಮಾಡಲಾಗಿದೆ.

ಈ ಹೋರಾಟಕ್ಕೆ ಜಾತಿಯ ಬಣ್ಣ ಕಟ್ಟುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ಮೇಲೆ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಈ ಹಿಂದೆ ಬಿಜೆಪಿ ಪಕ್ಷದ ನಾಯಕರಾದ ಅಪ್ಪಚ್ಚು ರಂಜನ್ ವಿರುದ್ಧ ಕಾಂಗ್ರೆಸ್ ಪಕ್ಷ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ಮಾಡಿಲ್ಲವೇ..? ಆ ಸಂದರ್ಭದಲ್ಲಿ ಪೊಲೀಸರು ಕೇಸ್ ಯಾಕೆ ಹಾಕಿರಲಿಲ್ಲ ಎಂದು ಪ್ರಶ್ನಿಸಿದ ರಾಬಿನ್ ದೇವಯ್ಯ, ಬಿಜೆಪಿ ಪಕ್ಷಕ್ಕೆ ಇದನ್ನು ಕಾನೂನಾತ್ಮಕವಾಗಿ ಎದುರಿಸುವ ಶಕ್ತಿ ಹಾಗೂ ಸಾಮರ್ಥ್ಯ ಹೊಂದಿದೆ. ಶಾಸಕ ಪೊನ್ನಣ್ಣನವರ ಸಲಹೆ ಬಿಜೆಪಿ ಪಕ್ಷಕ್ಕೆ ಅಗತ್ಯವಿಲ್ಲ ಎಂದರು.

ಬಿಜೆಪಿ ಪಕ್ಷದ ಪ್ರಮುಖರು ಭೂ ಕಬಳಿಕೆ ಮಾಡಿದ್ದಾರೆ, ದನ ಸಾಗಾಟ ಮಾಡಿದ್ದಾರೆ ಎಂದು ಶಾಸಕ ಪೊನ್ನಣ್ಣ ಹೇಳುತ್ತಿದ್ದಾರೆ. ಇಂತವರ ಮೇಲೆ ನಿರ್ದಾಕ್ಷಿಣ್ಯವಾದ ಕ್ರಮಗಳನ್ನು ಕೈಗೊಳ್ಳಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ, ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಗೆ ಬರುವ ಚೆತ್ತು ಕಲ್ಲು ಇಟ್ಟಿಗೆ ಬೆಲೆ ದುಪ್ಪಟ್ಟಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಕಡಿಮೆ ಬೆಲೆಗೆ ಇಟ್ಟಿಗೆಗಳು ಬರುತ್ತಿದ್ದವು ಇದೀಗ ಬೆಲೆ ಜಾಸ್ತಿ ಆಗಲು ಕಾರಣವೇನು? ಈ ವಿಷಯವನ್ನು ಜನರ ಮುಂದಿಡಿ ಎಂದು ಆಗ್ರಹಿಸಿದರು.

೨೦೧೧ ರಲ್ಲಿ ಆಗಿನ ಸ್ಪೀಕರ್ ಕೆ.ಜಿ. ಬೋಪಯ್ಯನವರ ಪ್ರತಿಕೃತಿ ದಹನ ಮಾಡಲಾಗಿದೆ. ಅದರ ಮುಂದಾಳತ್ವ ದಿವಂಗತ ಎ.ಕೆ. ಸುಬ್ಬಯ್ಯ ವಹಿಸಿದ್ದರು.

ಕೊಡಗಿನ ಅಪ್ಪಚ್ಚು ರಂಜನ್, ಎಂ.ಸಿ. ನಾಣಯ್ಯನವರ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಯಾರು ಕೂಡ ಜಾತಿ ರಾಜಕೀಯ ಮಾಡಲಿಲ್ಲ. ಜಾತಿ ಎತ್ತಿಕಟ್ಟುವ ಕೆಲಸ ಮಾಡಿಲ್ಲ ಎಂದು ನೆನಪಿಸಿದರು. ಎಲ್ಲಾ ಸಂದರ್ಭದಲ್ಲಿ ಜಾತಿ ರಾಜಕಾರಣವನ್ನು ಮುನ್ನಲೆಗೆ ತರುವುದು ಸರಿಯಲ್ಲ. ಇದನ್ನು ಸಂಪೂರ್ಣವಾಗಿ ವಿರೋಧ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕ್ರಿಯೆ ನಿಲ್ಲಿಸಬೇಕು. ಅಭಿವೃದ್ಧಿ ಕೆಲಸಗಳ ಬಗ್ಗೆ ಶಾಸಕ ಪೊನ್ನಣ್ಣ ಮುತುವರ್ಜಿ ವಹಿಸುವ ಬಗ್ಗೆ ಹೇಳಿದ್ದಾರೆ ಇದನ್ನು ನಾವು ಸ್ವಾಗತ ಮಾಡುತ್ತೇವೆ ಎಂದರು. ಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲೀರ ಚಲನ್, ವಾಟೇರಿರ ಬೋಪಣ್ಣ ಉಪಸ್ಥಿತರಿದ್ದರು.ಪೊಲೀಸ್ ದಬ್ಬಾಳಿಕೆ ಮೂಲಕ ಮತ್ತೆ ``ತುರ್ತು ಪರಿಸ್ಥಿತಿ’’! ಮಡಿಕೇರಿ, ಜೂ. ೨೭: ಭಾರತದಲ್ಲಿ ತುರ್ತು ಪರಿಸ್ಥಿತಿ ಜಾರಿಗೆ ಐವತ್ತು ವರ್ಷ ತುಂಬಿದ್ದು, ದುರದೃಷ್ಟವಶಾತ್ ವೀರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುವ ಮೂಲಕ ಮತ್ತೊಮ್ಮೆ ತುರ್ತು ಪರಿಸ್ಥಿತಿ ನಿರ್ಮಾಣವಾದಂತಾಗಿದೆ ಎಂದು ಮಡಿಕೇರಿ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಾಜಪೇಟೆಯಲ್ಲಿ ಇಂಧನದರಯೇರಿಕೆ ವಿರೋಧಿಸಿ ಪ್ರತಿಭಟನೆ ನÀಡೆಸಿದ್ದನ್ನು ಕಾಂಗ್ರೆಸ್ ಸಕಾರಾತ್ಮಕವಾಗಿ ಸ್ವೀಕರಿಸದೆ ಜಾತಿ ಬಣ್ಣ ಹಚ್ಚಿದ್ದು ಶೋಚನೀಯ ಎಂದರು. ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಜಾರಿಗಾಗಿ ದರಯೇರಿಕೆಯ ಗ್ಯಾರಂಟಿ ಜಾರಿಗೆ ತಂದಿದೆ ಎಂದು ಕುಟುಕಿದ ಅವರು, ಯಾವುದೇ ಆಡಳಿತ ಪಕ್ಷವು ಟೀಕೆ ಟಿಪ್ಪಣಿಗಳನ್ನು ಆರೋಗ್ಯಕರವಾಗಿ ಸ್ವೀಕರಿಸಬೇಕು ಎಂದರು.

ಇದೀಗ ಕಾರ್ಯಕರ್ತರು ಶಾಸಕ ಪೊನ್ನಣ್ಣ ಪರವಾಗಿ ದೇವಸ್ಥಾನಗಳಲ್ಲಿ ಪೂಜೆಗೆ ಮುಂದಾಗಿದ್ದು, ಸಿಎಂ ಅಥವಾ ಡಿಸಿಎಂ ಪರವಾಗಿ ಪೂಜೆ ಮಾಡುತ್ತಿಲ್ಲ ಇದು ಬಣ ರಾಜಕೀಯವನ್ನು ಎತ್ತಿ ಹೇಳುತ್ತಿದೆ. ಕೊಡಗಿನ ಜನರು ಬಿಜೆಪಿ ಪರವಿದ್ದಾರೆ ಎಂಬುದಕ್ಕೆ ಇತ್ತೀಚಿನ ಚುನಾವಣೆಗಳೇ ಸಾಕ್ಷಿ ಎಂದರು.

ಕಾರ್ಯಕತÀðರ ಮೇಲೆ ಮೊಕದ್ದಮೆ ದಾಖಲಿಸುವ ಪ್ರವೃತ್ತಿ ಮುಂದುವರಿದರೆ ಗ್ರಾಮ ಗ್ರಾಮಗಳಲ್ಲೂ ಪ್ರತಿಭಟನೆ ನಡೆಸುವುದಾಗಿ ಕುಂದಲ್ಪಾಡಿ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಡೀನ್ ಬೋಪಣ್ಣ, ಉಪಾಧ್ಯಕ್ಷ ಉಡುದೋಳಿ ಗಿರೀಶ್ ಹಾಗೂ ಕನ್ನಿಕಂಡ ಪೆಮ್ಮಯ್ಯ ಉಪಸ್ಥಿತರಿದ್ದರು.ನಿರಂತರ ಹೋರಾಟ: ಮಂಡಲ ಬಿಜೆಪಿಸೋಮವಾರಪೇಟೆ, ಜೂ. ೨೭: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದು ಸೋಮವಾರಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಎಲ್. ಗೌತಮ್ ಹೇಳಿದರು.

ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿ ಸರ್ಕಾರದ ಧೋರಣೆಯನ್ನು ಖಂಡಿಸಲಾಗಿದೆ. ಪ್ರತಿಕೃತಿ ದಹನವನ್ನು ಸಾರ್ವಜನಿಕರ ಆಕ್ರೋಶವನ್ನಾಗಿ ಪರಿಗಣಿಸಬೇಕೇ ಹೊರತು, ವೈಯುಕ್ತಿಕವಾಗಿ ಪರಿಗಣಿಸಬಾರದು.

ಶಾಸಕ ಪೊನ್ನಣ್ಣ ಅವರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿದ್ದು, ಕ್ಯಾಬಿನೆಟ್ ದರ್ಜೆ ಹೊಂದಿದ್ದಾರೆ. ಇಂತಹವರು ಮುಖ್ಯಮಂತ್ರಿಗಳಿಗೆ ಹೇಳಿ ಬೆಲೆ ಏರಿಕೆಯನ್ನು ತಡೆಯಬಹುದಿತ್ತು. ಇದನ್ನು ಮಾಡದೇ ಇರುವುದಕ್ಕೆ ಸ್ಥಳೀಯವಾಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ ಎಂದರು.

ಗೋಷ್ಠಿಯಲ್ಲಿದ್ದ ಮಂಡಲ ಬಿಜೆಪಿ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಮಾತನಾಡಿ, ಸರ್ಕಾರ ಹಾಗೂ ಸರ್ಕಾರದ ಭಾಗವಾಗಿರುವವರ ವಿರುದ್ಧ ನಡೆದ ಪ್ರತಿಭಟನೆಯನ್ನು ಕೆಲವರು ವೈಯುಕ್ತಿಕವಾಗಿ ಪರಿಗಣಿಸಿರುವುದು, ಜಾತಿಯನ್ನು ಎಳೆದು ತಂದಿರುವುದು ಖಂಡನೀಯ ಎಂದರು.

ಗೋಷ್ಠಿಯಲ್ಲಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮೋಕ್ಷಿಕ್ ರಾಜ್, ದರ್ಶನ್ ಜೋಯಪ್ಪ, ಎಸ್.ಆರ್. ಸೋಮೇಶ್ ಅವರುಗಳು ಉಪಸ್ಥಿತರಿದ್ದರು.