ಸಿದ್ದಾಪುರ, ಜೂ. ೨೭: ಗಾಂಜಾ ಸೇವಿಸಿ ಬಸ್ ತಂಗುದಾಣದಲ್ಲಿ ಗಲಾಟೆ ಮಾಡುತ್ತಿದ್ದ ಯುವಕನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಮಾಲ್ದಾರೆಯ ಖಾಸಗಿ ತೋಟದ ನಿವಾಸಿ ಕಾರ್ತಿಕ್ ಎಸ್.ಆರ್. (೨೭) ಬಂಧಿತ ಆರೋಪಿ.

ಕಾರ್ತಿಕ್ ಸಿದ್ದಾಪುರ ಸಮೀಪದ ಘಟ್ಟದಳ್ಳ ಬಸ್ ತಂಗುದಾಣದಲ್ಲಿ ಗಲಾಟೆ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಸಮಾಧಾನಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು. ಬಳಿಕ ಆತನ ಚಲನವಲನಗಳಿಂದ ಸಂಶಯಗೊAಡ ಪೊಲೀಸರು ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ತಪಾಸಣೆಯಲ್ಲಿ ಕಾರ್ತಿಕ್ ಗಾಂಜಾ ಸೇವಿಸಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.