ಚೆಯ್ಯಂಡಾಣೆ, ಜೂ. ೨೭: ಕಡಂಗಮರೂರು ಗ್ರಾಮಕ್ಕೆ ಒಳಪಟ್ಟ ಕಡಂಗ ಪಟ್ಟಣದ ರಸ್ತೆಯ ಎರಡು ಬದಿಗಳಲ್ಲಿ ಕಸವನ್ನು ಕಿಡಿಗೇಡಿಗಳು ತಂದು ಸುರಿಯುತ್ತಿದ್ದು ಅದೇ ರೀತಿ ಬೆಳ್ಳುಮಾಡು ಜಂಕ್ಷನ್‌ನಿAದ ಮುಂದಕ್ಕೆ ಪೆಟ್ರೋಲ್ ಬಂಕ್ ಸಮೀಪ ಹಾಗೂ ವೀರಾಜಪೇಟೆ-ನಾಪೋಕ್ಲು ರಸ್ತೆಯ ಎರಡು ಬದಿಗಳಲ್ಲಿ ಕಸದ ರಾಶಿ, ತ್ಯಾಜ್ಯಗಳನ್ನು ಚೀಲ ಹಾಗೂ ಪ್ಲಾಸ್ಟಿಕ್‌ಗಳಲ್ಲಿ ತುಂಬಿಸಿ ತಂದು ಸುರಿಯುತ್ತಿದ್ದು, ಇದಕ್ಕೆ ಸಂಬAಧಪಟ್ಟ ಕಾಕೋಟುಪರಂಬು ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳುತ್ತಿಲ್ಲ.

ಕಾಕೋಟುಪರಂಬು ಗ್ರಾಮ ಪಂಚಾಯಿತಿಯ ಕಡಂಗಮರೂರು ಗ್ರಾಮದ ಹೆದ್ದಾರಿಯುದ್ದಕ್ಕೂ ಕಸ ತ್ಯಾಜ್ಯಗಳನ್ನು ತುಂಬಿದ ಚೀಲಗಳನ್ನು ಕಟ್ಟಿ ಮನಬಂದAತೆ ಬಿಸಾಡಿದ್ದರೂ ಕೂಡ ಇದನ್ನು ಸ್ವಚ್ಛ ಮಾಡುವ ಅಥವಾ ಕಸವನ್ನು ಬಿಸಾಕಿದವರ ಮೇಲೆ ಕ್ರಮವಹಿಸುವ ಯಾವುದೇ ಪ್ರಕ್ರಿಯೆಗೆ ಕಾಕೋಟುಪರಂಬು ಗ್ರಾಮ ಪಂಚಾಯಿತಿ ಮುಂದಾಗಿಲ್ಲ. ಮದ್ಯದ ಬಾಟಲಿಗಳು, ಅಂಗಡಿಗಳ ತ್ಯಾಜ್ಯ, ಖಾಲಿ ಬಾಟಲಿಗಳು, ಮಾಂಸದ ಅಂಗಡಿಗಳ ತ್ಯಾಜ್ಯ, ಹಳೆಯ ಬಟ್ಟೆ ಬಗೆ-ಬಗೆಯ ತ್ಯಾಜ್ಯಗಳನ್ನು ಮೂಟೆ ಕಟ್ಟಿ ತಂದು ಇಲ್ಲಿ ಬಿಸಾಕಿದರೂ ಕೂಡ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಇದು ಕಾಣುತ್ತಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ. ಮಳೆ ಆರಂಭವಾಗಿದ್ದು ಬಿಸಾಕಿದ ಕಸವೆ ಕಾಡು ಬೆಳೆದು ಅದರ ಒಳಗಡೆ ಕೊಳೆಯುತ್ತಿದೆ. ಕೆಲವು ಪ್ಲಾಸ್ಟಿಕ್ ವಸ್ತುಗಳು ಕೊಚ್ಚಿ ರಸ್ತೆಯಲ್ಲಿ ತೇಲಾಡುತ್ತಿವೆ. ಇನ್ನಾದರೂ ಸಂಬAಧಪಟ್ಟವರು ಎಚ್ಚೆತ್ತುಕೊಳ್ಳು ವಂತೆ ಗ್ರಾಮಸ್ಥರ ಆಗ್ರಹವಾಗಿದೆ.