ಚೆಯ್ಯAಡಾಣೆ, ಜೂ. ೨೮: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಗ್ರಾಮದಲ್ಲಿ ಕಾಡಾನೆ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದ ಗಿಡಗಳನ್ನು ನಾಶಪಡಿಸಿದೆ. ಗುರುವಾರ ರಾತ್ರಿ ಕರಡ ಗ್ರಾಮದ ನಡಿಕೇರಿಯಂಡ ಅಪ್ಪಾಜಿಯವರ ತೋಟಕ್ಕೆ ಲಗ್ಗೆ ಇಟ್ಟ ಐದಕ್ಕೂ ಹೆಚ್ಚು ಕಾಡಾನೆ ಹಿಂಡು ೫೦ಕ್ಕೂ ಹೆಚ್ಚು ಅಡಿಕೆ, ಕಾಫಿ, ಬಾಳೆ ಮತ್ತಿತರರು ಗಿಡಗಳನ್ನು ತುಳಿದು ನಾಶಪಡಿಸಿದೆ. ಕಾಡಾನೆ ಉಪಟಳ ತಡೆಗೆ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಸದಸ್ಯ ಬೇಪುಡಿಯಂಡ ವಿಲಿನ್ ಒತ್ತಾಯಿಸಿದರು.