ನಾಪೋಕ್ಲು, ಜೂ. ೨೭: ಯುವತಿಯೋರ್ವಳು ಹೃದಯಾಘಾತದಿಂದ ಮೃತಪಟ್ಟ ಘಟನೆ ಸಮೀಪದ ನೆಲಜಿ ಗ್ರಾಮದಲ್ಲಿ ನಡೆದಿದೆ.
ನೆಲಜಿ ಗ್ರಾಮದ ಕಾಫಿ ಬೆಳೆಗಾರರಾದ ಮಣವಟ್ಟಿರ ಪೊನ್ನಪ್ಪ (ಪೊನ್ನು) ಎಂಬವರ ಪುತ್ರಿ ನಿಲಿಕಾ ಪೊನ್ನಪ್ಪ (೨೪) ಮೃತ ಯುವತಿ. ಮಡಿಕೇರಿಯ ಕೊಡಗು ವೈದ್ಯಕೀಯ ಕಾಲೇಜು ಮತ್ತು ಬೋಧಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನಿಲಿಕಾ ಕರ್ತವ್ಯ ನಿರ್ವಹಿಸುತ್ತಿದ್ದರು.
ಬೆಳಿಗ್ಗೆ ೭.೫೪ಕ್ಕೆ ಕರ್ತವ್ಯಕ್ಕೆ ತೆರಳಲು ನಿಲಿಕಾ ತಯಾರಾಗುತ್ತಿದ್ದುದನ್ನು ತಾಯಿ ಸೀತಾ ಗಮನಿಸಿದ್ದಾರೆ. ನಂತರ ವ್ಯಾನ್ ಬರುವ ಸಮಯವಾದರೂ ರೂಮಿನಿಂದ ಬರದಿದ್ದಾಗ ಸೀತಾ ಅವರು ಕೋಣೆಗೆ ತೆರಳಿ ನೋಡಿದ್ದು, ಈ ಸಂದರ್ಭ ಹಾಸಿಗೆ ಮೇಲೆ ಕುಸಿದು ಬಿದ್ದು ನಿಲಿಕಾ ಸಾವನ್ನಪ್ಪಿರುವುದು ಕಂಡು ಬಂದಿದೆ. ನಿಲಿಕಾಳ ಅಂತ್ಯಕ್ರಿಯೆ ಗುರುವಾರ ಸ್ವಗೃಹದಲ್ಲಿ ನೆರವೇರಿತು.