*ಗೋಣಿಕೊಪ್ಪ, ಜೂ. ೨೭: ಗೋಣಿಕೊಪ್ಪದ ಸುಯೋಗ್ ಮೆಡಿಸಿಟಿ ಮೆಡಿಕಲ್ ಸೆಂಟರ್ ಮತ್ತು ಮೈಸೂರು ಸುಯೋಗ್ ಆಸ್ಪತ್ರೆ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದ ಕಾವೇರಿ ಕಾಂಪ್ಲೆಕ್ಸ್ನಲ್ಲಿ ಉಚಿತ ಹೃದ್ರೋಗ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಮೈಸೂರು ಸುಯೋಗ್ ಅಸ್ಪತ್ರೆಯ ಜನರಲ್ ಮ್ಯಾನೇಜರ್ ಅರುಣ್ ಕುಮಾರ್ ಪಿ.ಜಿ. ತಿಳಿಸಿದ್ದಾರೆ.
ಮೆಡಿಸಿಟಿ ಮೆಡಿಕಲ್ ಸೆಂಟರ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ತಾ. ೨೮ ರಂದು ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೨ ಗಂಟೆಯವರಗೆ ಶಿಬಿರ ನಡೆಯಲಿದ್ದು, ಹೃದಯ ಶಸ್ತçಚಿಕಿತ್ಸಾ ತಜ್ಞವೈದ್ಯ ಡಾ. ರವಿಕುಮಾರ್ ಟಿ.ಎನ್. ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಶಿಬಿರದಲ್ಲಿ ಉಚಿತ ಸಮಾಲೋಚನೆಯಿದ್ದು, ಇ.ಸಿ.ಜಿ., ಆರ್.ಬಿ.ಎಸ್. ಪರೀಕ್ಷೆಗಳು ಲಭ್ಯವಿರುತ್ತವೆ. ಹೃದಯದ ಸಮಸ್ಯೆಗಳಿರುವವರು ಬೆಳಿಗ್ಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ೦೮೨೧-೨೫೩೩೬೦೦, ೯೯೮೬೩೯೯೮೬೨ ಸಂಪರ್ಕಿಸಬಹುದಾಗಿದೆ ಎಂದರು.