ಗೋಣಿಕೊಪ್ಪಲು, ಜೂ. ೨೭ : ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ತಾ. ೨೮ ರಿಂದ (ಇಂದಿನಿAದ)
ತಾ. ೩೦ರವರೆಗೆ ಕೊಡಗು - ಕೇರಳ ಮಾಸ್ಟರ್ ಕಪ್ ಹಾಕಿ ೨೦೨೪ ನಡೆಯಲಿದೆ ಎಂದು ಹಾಕಿ ವೀಕ್ಷಕ ವಿವರಣೆಗಾರ, ಕಾರ್ಯಕ್ರಮ ಪ್ರಮುಖರಾದ ಚೆಪ್ಪುಡೀರ ಕಾರ್ಯಪ್ಪ ತಿಳಿಸಿದ್ದಾರೆ.
ಕೊಡಗು - ಕೇರಳ ರಾಜ್ಯದ ನಡುವೆ ಮತ್ತಷ್ಟು ಸೌಹಾರ್ದತೆಯನ್ನು ಕ್ರೀಡೆಯ ಮೂಲಕ ಕಾಪಾಡಲು ಹಾಗೂ ಹಾಕಿ ಕ್ರೀಡೆಗೆ ಉತ್ತೇಜನ
ನೀಡುವ ಸಲುವಾಗಿ ಇಂತಹ ಪ್ರಯತ್ನ ಮೊದಲ ಬಾರಿಗೆ ಆಯೋಜನೆ ಮಾಡಲಾಗಿದೆ.
ಇಂದಿನಿAದ ಮಾಸ್ಟರ್ ಹಾಕಿ ಕಪ್ - ೨೦೨೪
(ಮೊದಲ ಪುಟದಿಂದ) ತಾ. ೨೯ ರಂದು ಉದ್ಘಾಟನಾ ಸಮಾರಂಭ, ತಾ. ೩೦ರಂದು ಸಮಾರೋಪ ಸಮಾರಂಭ ನಡೆಯಲಿದೆ. ಅಂತರರಾಷ್ಟಿçÃಯ ಹಾಕಿ ಕ್ರೀಡಾಪಟುಗಳು, ಒಲಿಂಪಿಯನ್ಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು ಪ್ರತಿ ಪಂದ್ಯಾವಳಿ ೨೦ ನಿಮಿಷಗಳದ್ದಾಗರುತ್ತದೆ.
ಕೊಡಗಿನಿಂದ ಹಲವು ತಂಡಗಳು ಈ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು ೩೦ ವರ್ಷದ ಮೇಲ್ಪಟ್ಟ ಮಹಿಳೆಯರು ಹಾಗೂ ಪುರುಷರಿಗೆ ಪಂದ್ಯ ನಡೆಯಲಿದೆ. ಕೊಡಗಿನಲ್ಲಿ ಹಾಕಿ ಮತ್ತಷ್ಟು ಜೀವಂತವಾಗಿರಿಸುವ ಪ್ರಯತ್ನದಲ್ಲಿ ವಯಸ್ಕ (ವೆಟ್ರರ್ನ್ಸ್)ಗಳಿಗೆ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ವಿಜೇತ ತಂಡಗಳು ಹೊರ ದೇಶದಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ.
ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಪಂದ್ಯಾವಳಿಯು ನಡೆಯಲಿದ್ದು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.