ವೆಸ್ಟ್ ಇಂಡೀಸ್ ಮತ್ತು ಅಮೇರಿಕಾದ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಟಿ-೨೦ ವಿಶ್ವಕಪ್ ಪಂದ್ಯಾವಳಿಯಲ್ಲಿ ಇದುವರೆಗೆ ತಾನಾಡಿರುವ ಎಲ್ಲ ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಟೀಂ ಇಂಡಿಯಾ ಸೆಮಿಫೈನಲ್ಗೆ ಲಗ್ಗೆಯಿಟ್ಟಿದೆ.
ಲೀಗ್ ಹಂತ ಮತ್ತು ಸೂಪರ್ ೮ ಹಂತದ ಪ್ರತಿ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಅಜೇಯವಾಗಿ ಉಳಿದಿದೆ. ಹೀಗೆ ತಾನಾಡಿರುವ ಎಲ್ಲಾ ಪಂದ್ಯಗಳನ್ನು ಜಯಿಸಿ ಟೀಂ ಇಂಡಿಯಾ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸುತ್ತಿರುವುದು ಇದು ೨ನೇ ಬಾರಿ. ೨೦೧೪ ರ ಟಿ-೨೦ ವಿಶ್ವಕಪ್ನಲ್ಲೂ ಭಾರತ ಅಜೇಯವಾಗಿ ಉಳಿದು ಸೆಮಿಫೈನಲ್ ಪ್ರವೇಶಿಸಿತ್ತು. ಆಗ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ಭಾರತ ಫೈನಲ್ನಲ್ಲಿ ಶ್ರೀಲಂಕಾಗೆ ಮಣಿದಿತ್ತು.
ದಕ್ಷಿಣ ಅಮೇರಿಕಾ ಖಂಡದಲ್ಲಿರುವ ವೆಸ್ಟ್ ಇಂಡೀಸ್ನ ಭಾಗವಾಗಿರುವ ಗಯಾನಾದಲ್ಲಿ ಜೂನ್ ೨೭ ರಂದು ನಡೆಯಲಿರುವ ಸೆಮಿಫೈನಲ್ನಲ್ಲಿ, ಟೀಂ ಇಂಡಿಯಾ ಹಾಲಿ ಚಾಂಪಿಯನ್ ಇಂಗ್ಲೆAಡ್ ವಿರುದ್ಧ ಸೆಣಸಲಿದೆ.
ಮತ್ತೊಂದು ಸೆಮಿಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ವೆಸ್ಟ್ ಇಂಡೀಸ್ನ ಟ್ರಿನಿಡಾಡ್ನ ಬ್ರಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಫೈನಲ್ ಜೂನ್ ೨೯ ರಂದು ಶನಿವಾರ ಬಾರ್ಬಡಾಸ್ನ ಕಿಂಗ್ಸ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೀಗೆ ಟಿ-೨೦ ಕ್ರಿಕೆಟ್ ವಿಶ್ವಕಪ್ ಟೀಂ ಇಂಡಿಯಾ ಮುಡಿಗೇರಲು ಕೇವಲ ಎರಡು ಹೆಜ್ಜೆ ಬಾಕಿ ಇದೆ. ಆದರೆ ಮಹತ್ವದ ಈ ಎರಡು ಹೆಜ್ಜೆಗಳಲ್ಲಿ ಎಡವದಂತೆ, ಭಾರತ ತಂಡ ಸಮನ್ವಯತೆ ಕಾಯ್ದುಕೊಳ್ಳಬೇಕಿದೆ. ಏಕೆಂದರೆ ೨೦೦೭-೦೮ ರಲ್ಲಿ ನಡೆದ ಈ ಪಂದ್ಯಾವಳಿಯ ಮೊದಲ ಆವೃತ್ತಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ವಿಶ್ವಕಪ್ ಮುಡಿಗೇರಿಸಿದ ನಂತರ, ಭಾರತ ಅಂತಿಮ ಹಂತಗಳಲ್ಲಿ ಮುಗ್ಗರಿಸಿದೆ. ೨೦೧೪ ರಲ್ಲಿ ಫೈನಲ್ನಲ್ಲಿ ಸೋಲು, ೨೦೧೫ ಮತ್ತು ೨೦೧೬ ರಲ್ಲಿ ಸೆಮಿಫೈನಲ್ನಲ್ಲಿ ಸೋಲು ಕಂಡಿರುವ ಭಾರತ, ಈ ಬಾರಿ ಉಳಿದಿರುವ ೨ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ.
೨೦೧೦ ಮತ್ತು ೨೦೨೨-೨೩ ರಲ್ಲಿ ವಿಶ್ವಕಪ್ ಎತ್ತಿಹಿಡಿದಿರುವ ಇಂಗ್ಲೆAಡ್ ತಂಡದ ಹೊಡಿ-ಬಡಿ, ಆಕ್ರಮಕಾರಿ ಪ್ರವೃತ್ತಿಗೆ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಬೌಲರ್ಗಳು ಕಡಿವಾಣ ಹಾಕಬೇಕಿದೆ. ಜಸ್ಪಿçÃತ್ ಬೂಮ್ರಾ, ಅರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ಇಂಗ್ಲೆAಡ್ ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸಬೇಕಿದೆ.
ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ರಿಷಬ್ಪಂತ್, ಶಿವಂ ದುಬೆ ಬ್ಯಾಟಿಂಗ್ನಲ್ಲಿ ಅಬ್ಬರಿಸಿ ಉತ್ತಮ ಪ್ರದರ್ಶನ ನೀಡಬೇಕಿದೆ.
ಲೀಗ್ನಲ್ಲಿ ಪಾಕಿಸ್ತಾನ, ಐರ್ಲೆಂಡ್, ಅಮೇರಿಕಾ ಸೂಪರ್ ೮ ಹಂತದಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಆಸ್ಟೆçÃಲಿಯಾ ತಂಡಗಳ ವಿರುದ್ಧ ಗೆಲುವಿನ ಲಯ ಕಂಡುಕೊAಡಿರುವ ಟೀಂ ಇಂಡಿಯಾದ ವಿಜಯದ ನಡೆ ಸೆಮಿಫೈನಲ್, ಫೈನಲ್ನಲ್ಲೂ ಮುಂದುವರಿಯಲಿ. ಈ ಬಾರಿ ಟಿ-೨೦ ವಿಶ್ವಕಪ್ ನಮ್ಮದಾಗಲಿ.
- ಕಲ್ಲುಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ. ಮೊ. ೯೮೪೫೪೯೯೧೧೨.