ಗೋಣಿಕೊಪ್ಪಲು, ಜೂ. ೨೬: ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಗೋಣಿಕೊಪ್ಪಲುವಿನಲ್ಲಿ ಜರುಗಿತು. ಲಯನ್ಸ್ ಸಂಸ್ಥೆಯ ಹಾಲಿ ಅಧ್ಯಕ್ಷ ಪೊನ್ನಿಮಾಡ ಲೋಕೇಶ್ ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಜೆ.ಕೆ. ರಾವ್. ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಕೊಡಗು, ಮಂಗಳೂರು, ಹಾಸನ, ಚಿಕ್ಕಮಂಗಳೂರು ಜಿಲ್ಲೆಗಳು ಒಳಪಟ್ಟಂತೆ ಲಯನ್ಸ್ ಜಿಲ್ಲಾ ೩೧೭ಡಿಯ ಗೋಣಿಕೊಪ್ಪ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಚೆಟ್ಟಿಮಾಡ ಅಪ್ಪಣ್ಣ, ಕಾರ್ಯದರ್ಶಿಯಾಗಿ ಪಟ್ರಂಗಡ ಶ್ರೀಮಂತ್, ಖಜಾಂಚಿಯಾಗಿ ಮಂಡೇಪAಡ ಸಚಿನ್ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ಅಧಿಕಾರ ಸ್ವೀಕರಿಸಿದರು. ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಜೆ.ಕೆ. ರಾವ್ ಮಾತನಾಡಿ, ಲಯನ್ಸ್ ಸಂಸ್ಥೆಯು ಅಂತರರಾಷ್ಟಿçÃಯ ಮಟ್ಟದಲ್ಲಿ ಹೆಸರು ಗಳಿಸಿದೆ. ಜನರ ಸೇವೆಗಾಗಿ ಲಯನ್ಸ್ ಸಂಸ್ಥೆಯ ಸದಸ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿಯೂ ಲಯನ್ಸ್ ಸಂಸ್ಥೆಯು ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಗೋಣಿಕೊಪ್ಪ ಲಯನ್ಸ್ ಸಂಸ್ಥೆಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ ಅವರು, ಜನರ ಸೇವೆಗಾಗಿ ಪ್ರತಿ ಸದಸ್ಯರ ಸಹಕಾರ ಅತ್ಯಮೂಲ್ಯ ಎಂದರು. ವೇದಿಕೆಯಲ್ಲಿ ವಲಯ ಅಧ್ಯಕ್ಷ ಮನ್ನಕಮನೆ ಬಾಲಕೃಷ್ಣ, ಲಯನ್ಸ್ ಸಂಸ್ಥೆಯ ಪಟ್ಟಡ ಧನು ಉತ್ತಯ್ಯ, ಜೆ.ಎಸ್. ಮಾದಪ್ಪ, ಬೋಸ್ ಪೆಮ್ಮಯ್ಯ, ಡಾ. ಲಿರೀಶ್ ಚಿಣ್ಣಪ್ಪ, ಅಲ್ಲುಮಾಡ ಸುನೀಲ್, ಕೊಂಗAಡ ಅಚ್ಚಯ್ಯ, ಮಲ್ಲಂಗಡ ರಾಕೇಶ್, ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಪಾಲ್ಗೊಂಡಿದ್ದರು. ೧೦ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ, ರಾಜ್ಯಕ್ಕೆ ೨ನೇ ಸ್ಥಾನ ಪಡೆದ ಲಯನ್ಸ್ ಸಂಸ್ಥೆಯ ವಿದ್ಯಾರ್ಥಿನಿ ಭಾಷಿತರವರಿಗೆ ಸಂಸ್ಥೆಯ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.