ಕುಶಾಲನಗರ, ಜೂ. ೨೬: ಕುಂಜಿಲದಲ್ಲಿ ಎಲ್.ಕೆ.ಜಿ.ಯಿಂದ ಒಂಭತ್ತನೇ ತರಗತಿಯವರೆಗೆ ಕಾರ್ಯನಿರ್ವಹಿಸುತ್ತಿದ್ದ ಆಕ್ಸ್ಫರ್ಡ್ ಇಂಗ್ಲೀಷ್ ಮೀಡಿಯಂ ಶಾಲೆಯು ಇದೀಗ ಹತ್ತನೇ ತರಗತಿಯನ್ನೂ ಪ್ರಾರಂಭಿಸಿದೆ.
ತಾ. ೨೪ರಂದು ನಡೆದ ತರಗತಿ ಆರಂಭ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಮುಖ್ಯ ಅತಿಥಿಗಳಾಗಿ ಶಕ್ತಿ ದಿನಪತ್ರಿಕೆ ಸಲಹಾ ಸಂಪಾದಕ ಬಿ.ಜಿ. ಅನಂತ ಶಯನ ಅವರು ಮಾತನಾಡಿ, ಮಕ್ಕಳಲ್ಲಿ ಧ್ಯೇಯ, ಗುರಿ ಮತ್ತು ಛಲವಿದ್ದಲ್ಲಿ ಉತ್ತಮ ಜೀವನ, ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು. ಶಾಲಾ ಮಕ್ಕಳ ಪ್ರತಿಭೆಯನ್ನು ಶ್ಲಾಘಿಸಿದರು.
ವ್ಯವಸ್ಥಾಪಕ ನಿರ್ದೇಶಕ ಶಾಹಿದ್ ಆಲಿ ಅವರು ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಶ್ರಮಪಟ್ಟು ಶಾಲೆ ಆರಂಭಿಸಲಾಯಿತು ಎಂದರು. ಶಾಲಾ ಅಧ್ಯಕ್ಷ ಮಹಬೂಬ್ ಎನ್.ಕೆ. ಅವರು ಮಾತನಾಡಿ, ಶಾಲೆಯ ಏಳಿಗೆಗೆ ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕ ವರ್ಗದ ಸಹಭಾಗಿತ್ವದಿಂದ ಸಾಧ್ಯ ಎಂದರು. ಹತ್ತನೇ ತರಗತಿಗೆ ನೋಂದಾಯಿಸಿ ಕೊಂಡಿರುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊAದಿಗೆ ಉತ್ತೀರ್ಣ ರಾಗಬೇಕು ಎಂದು ಬಯಸಿದರು.
ಪ್ರಾಂಶುಪಾಲೆ ಕವಿತಾ ಸ್ವಾಗತಿಸಿದರು. ಎಲ್ಸಿ ಮಾಸ್ಕರೇನ್ಹಸ್ ಪ್ರತಿಜ್ಞಾವಿಧಿ ಬೋಧಿಸಿದರು.