ಮಡಿಕೇರಿ, ಜೂ. ೨೬: ತಿತಿಮತಿಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ನೃತ್ಯ ಸಂಯೋಜಕಿ ಹಾಗೂ ಯಹಾವಿ ಡಾನ್ಸ್ ಅಕಾಡೆಮಿ ನಿರ್ದೇಶಕಿ ಶ್ವೇತಾ ಅವರಿಗೆ ಗೋಲ್ಡನ್ ಕೊರಿಯೊಗ್ರಾಫರ್ ಪ್ರಶಸ್ತಿ ಲಭಿಸಿದೆ.

ವಾವ್ ಸಿನಿಮಾಸ್ ಚಾನಲ್ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾವ್ ಸಿನಿಮಾದ ನಿರ್ದೇಶಕ, ನಿರ್ಮಾಪಕ ಅವಿನಾಶ್, ಬಿಗ್ ಬಾಸ್ ಸೀಸನ್ -೪ ವಿಜೇತ ಪ್ರಥಮ್, ನೃತ್ಯ ಸಂಯೋಜಕರುಗಳಾದ ಜಗ್ಗಿ, ಶಶಿ, ಭೂಷಣ್, ವರುಣ್, ರವಿ ಮೋಹನ್, ಮತ್ತಿತರರು ಶ್ವೇತಾ ಸುಬ್ರಮಣಿಗೆ ಪ್ರಶಸ್ತಿ ಪ್ರದಾನ ಮಾಡಿದರು.