ಮಡಿಕೇರಿ, ಜೂ. ೨೫: ಆನೆಚೌಕೂರು ಗೋಣಿಕೊಪ್ಪ ಹುಣಸೂರು ರಸ್ತೆಯನ್ನು ರಾತ್ರಿ ಸಂಚಾರಕ್ಕೆ ಮುಚ್ಚುವ ಹುನ್ನಾರ ಇನ್ನೂ ಇದೆಯೇ ಎಂದು ಯುಕೋ ಸಂಘಟನೆ ಪ್ರಶ್ನಿಸಿದೆ. ನಿನ್ನೆ ಈ ಮಾರ್ಗದಲ್ಲಿ ಫೋಟೋ ಕ್ಲಿಕ್ಕಿಸಿದ ಆರೋಪದಡಿ ಕೆಲವರಿಗೆ ಇಲಾಖೆ ದಂಡ ವಿಧಿಸಿದೆ. ಆದರೆ ನೀಡಲಾಗಿರುವ ರಶೀದಿಯಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಇರುವುದು ಬೆಳಿಗ್ಗೆ ೬ ರಿಂದ ಸಂಜೆ ೬ರ ತನಕ ಮಾತ್ರ ಎಂಬ ಉಲ್ಲೇಖವಿರುವುದು ಈ ಅನುಮಾನಕ್ಕೆ ಕಾರಣವಾಗಿದೆ ಎಂದು ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಜನರೂ ಎಚ್ಚೆತ್ತುಕೊಳ್ಳಬೇಕಿದೆ. ಅಲ್ಲದೆ ಸಂಬAಧಪಟ್ಟವರು ಈ ಆತಂಕದ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.