ಕುಶಾಲನಗರ, ಜೂ. ೨೫: ಕುಶಾಲನಗರ ಯೋಜನಾ ಪ್ರಾಧಿಕಾರದ (ಕುಡಾ) ನೂತನ ಅಧ್ಯಕ್ಷರಾಗಿ ಕುಟ್ಟಂಡ ಪ್ರಮೋದ್ ಮುತ್ತಪ್ಪ ನೇಮಕಗೊಂಡಿದ್ದಾರೆ.

ಪ್ರಮೋದ್ ಅವರು ಕುಶಾಲನಗರ ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತು ಪುರಸಭೆ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಾಧಿಕಾರದ ಸದಸ್ಯರಾಗಿ ವಿ.ಎಸ್. ಸಜಿ, ಕೆ.ಆರ್. ಕಿರಣ್ ಕುಮಾರ್ ಮತ್ತು ಕೆ.ಆರ್. ಸಂಗೀತ ಅವರುಗಳನ್ನು ನೇಮಕ ಮಾಡಲಾಗಿದೆ.