ಸಿದ್ದಾಪುರ, ಜೂ. ೨೫: ಅಮ್ಮತ್ತಿ ಸಮೀಪ ಕಾಫಿ ತೋಟದೊಳಗೆ ವಿದ್ಯುತ್ ತಂತಿಯ ಮೇಲೆ ಮರವೊಂದು ಬಿದ್ದ ಪರಿಣಾಮ ಕೆಲ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ನಂತರ ಸೆಸ್ಕಾಂ ಸಿಬ್ಬಂದಿ ಮಳೆಯ ನಡುವೆ ಕಾರ್ಯನಿರ್ವಹಿಸಿ ಮರವನ್ನು ಕಡಿದು ತೆರವುಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದರು.