ಸುಂಟಿಕೊಪ್ಪ, ಜೂ. ೨೪: ನಿಂತಿದ್ದ ಬಸ್‌ಗೆ ಹಿಂಬದಿಯಿAದ ಬಂದು ಮತ್ತೊಂದು ಬಸ್ ಡಿಕ್ಕಿಪಡಿಸಿದ ಪರಿಣಾಮ ಮಹಿಳೆಯರಿಬ್ಬರು ಗಾಯಗೊಂಡ ಘಟನೆ ಕೆದಕಲ್ ಸಮೀಪ ನಡೆದಿದೆ.

ಕೆದಕಲ್ ಭದ್ರಕಾಳಿ ದೇವಸ್ಥಾನದಿಂದ ಅನತಿ ದೂರದಲ್ಲಿ ಮಡಿಕೇರಿ ಕಡೆಯಿಂದ ಬಂದ ಸರಕಾರಿ ಬಸ್ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲಿಸಿದ್ದ ಸಂದರ್ಭ ಹಿಂಬದಿಯಿAದ ಬಂದ ಮತ್ತೊಂದು ಕೆಎಸ್‌ಆರ್‌ಟಿಸಿ ಬಸ್ ಗುದ್ದಿದೆ. ಪರಿಣಾಮ ನಿಂತಿದ್ದ ಬಸ್‌ಗೆ ಹತ್ತುತ್ತಿದ್ದ ರುಕ್ಯಿಯ ಮತ್ತು ಸಫಾನ ಕೆಳಗೆ ಬಿದ್ದು ತಲೆ ಮತ್ತು ಕೈಗೆ ಗಾಯಗಳಾಗಿ ಮಡಿಕೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮೊಕದ್ದಮೆ ದಾಖಲಿಸಿಕೊಂಡು ೨ ಬಸ್‌ಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.