ಮಡಿಕೇರಿ, ಜೂ. ೨೫: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗೆ ಒಟ್ಟು ೨೦ ವರ್ಷ ಕಠಿಣ ಜೈಲು ಶಿಕ್ಷೆಯೊಂದಿಗೆ ಸಂತ್ರಸ್ತೆಗೆ ಆರೋಪಿ ಪರಿಹಾರ ರೂಪದಲ್ಲಿ ರೂ. ೫ ಲಕ್ಷ ನೀಡುವಂತೆ ೧ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಪ್ರಕಟಿಸಿದೆ.
ಟಿ.ಕೆ. ಮುತ್ತು (ಮುರುಳಿ-೪೯) ಶಿಕ್ಷಗೆ ಒಳಗಾದ ವ್ಯಕ್ತಿ. ಚೆಟ್ಟಳ್ಳಿ ಸಮೀಪದ ಗ್ರಾಮವೊಂದರ ಲೈನ್ಮನೆಯಲ್ಲಿ ನೆಲೆಸಿದ್ದ ಮುರುಳಿ ಅದೇ ತೋಟದ ಮತ್ತೊಂದು ಲೈನ್ಮನೆಯಲ್ಲಿ ವಾಸವಿದ್ದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಕುರಿತು ತಾ. ೧.೩.೨೦೨೨ ರಂದು ಕೊಡಗು ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ ೩೬೬, ೩೫೪ (ಎ)(೧), ೩೭೬ (೨)(ಎನ್), ಪೋಕ್ಸೋ ಕಾಯ್ದೆ, ಎಸ್.ಸಿ.,ಎಸ್.ಟಿ. ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯನ್ನು ಬಂಧಿಸಲಾಗಿತ್ತು.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಅಂದಿನ ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಸಹಾಯಕ ತನಿಖಾಧಿಕಾರಿ ಹೆಚ್.ವಿ. ಕನ್ನಿಕಾ ಸಂಪೂರ್ಣ ತನಿಖೆ ನಡೆಸಿ ಆರೋಪಿ ಮತ್ತು ವಿರುದ್ಧ ನ್ಯಾಯಾಲಯಕ್ಕೆ
(ಮೊದಲ ಪುಟದಿಂದ) ೮.೫.೨೨ ರಂದು ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ತಾ. ೨೪ ರಂದು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ. ಪ್ರಶಾಂತಿ ಅವರು ವಿವಿಧ ಪ್ರಕರಣಗಳಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ ಒಟ್ಟು ೨೦ ಶಿಕ್ಷೆ ವಿಧಿಸುವುದರೊಂದಿಗೆ ರೂ. ೫ ಲಕ್ಷ ಹಣವನ್ನು ಸಂತ್ರಸ್ತೆಗೆ ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕ ಎನ್.ಪಿ. ದೇವೇಂದ್ರ ಆರೋಪಿ ವಿರುದ್ಧ ವಾದ ಮಂಡಿಸಿದರು.