ಅಖಿಲ ಕೊಡವ ಸಮಾಜ ಖಂಡನೆ

ಮಡಿಕೇರಿ: ಪ್ರಕೃತಿ ಮಾತೆಯನ್ನು, ಹರಿಯುವ ನೀರನ್ನು, ಗುರುಕಾರೋಣರನ್ನು ಎಂದಿಗೂ ಕೈಎತ್ತಿ ಬೇಡುವ; ಪಂಚಭೂತಗಳ ಆರಾಧಕರಾದ ಕೊಡವ ಜನಾಂಗದಲ್ಲಿ ಹುಟ್ಟಿ ಬೆಳೆದ ಮೇರು ವ್ಯಕ್ತಿತ್ವದ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಅಣಕು ಶವಯಾತ್ರೆಯನ್ನು ಕೆಲ ಕೊಡವ ಮುಖಂಡರುಗಳೇ ಮಾಡಿದ್ದು ಸರಿಯಲ್ಲ ಎಂದು ಅಖಿಲ ಕೊಡವ ಸಮಾಜ ಹೇಳಿದೆ. ಸರ್ಕಾರ ವತಿಯಿಂದ ತಪ್ಪಾಗಿರಬಹುದು, ಆದರೆ ಅದನ್ನು ಪ್ರತಿಭಟಿಸಲು ಇತರ ಮಾರ್ಗಗಳಿದ್ದರೂ ತಾ.೨೦ ರಂದು ನಡೆದ ಅಣಕು ಶವಯಾತ್ರೆ ಪ್ರತಿಭಟನೆ ಖಂಡನೀಯ ಎಂದು ಅ.ಕೊ. ಸಮಾಜ ತಿಳಿಸಿದೆ. ಕೊಡವ ಸಮಾಜಗಳ ಒಕ್ಕೂಟ

ಮಡಿಕೇರಿ: ಪೊನ್ನಣ್ಣ ಅವರ ಅಣಕು ಶವಯಾತ್ರೆ, ಪ್ರತಿಕೃತಿ ದಹನವನ್ನು ಕೊಡವ ಸಮಾಜಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ, ಪ್ರತಿಕೃತಿ ದಹನ, ಅಣಕು ಶವಯಾತ್ರೆಯಂತಹ ಸೂಕ್ಷ್ಮವಿಚಾರಗಳನ್ನು ನಡೆಸಿರುವುದು ಸರಿಯಲ್ಲ. ಇದು ಕೊಡವ ಜನಾಂಗಕ್ಕೆ ಮಾಡಿದ ಅವಮಾನವಾಗಿದೆ. ಪೊನ್ನಣ್ಣ ಅವರು ಕೊಡಗಿನ ಅಭಿವೃದ್ಧಿ ಪರ ಕಾಳಜಿ ವಹಿಸಿ ಕೆಲಸಗಳನ್ನು ನಡೆಸುತ್ತಿದ್ದಾರೆ. ಅವರ ಸಮಾಜಮುಖಿ ಕೆಲಸಗಳನ್ನು ಪಕ್ಷಾತೀತವಾಗಿ ಬೆಂಬಲಿಸಬೇಕಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.ಬಿಜೆಪಿಯ ಮನೋ ವಿಕಾರ

ಶ್ರೀಮಂಗಲ: ಕಳೆದ ೨೫ ವರ್ಷಗಳಲ್ಲಿ ಬಿಜೆಪಿ ಶಾಸಕರು ಜಿಲ್ಲೆಯಲ್ಲಿ ಅಧಿಕಾರದಲ್ಲಿದ್ದಾಗ ಆಗದ ಅಭಿವೃದ್ಧಿ ಕಾಮಗಾರಿ, ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೆ ಕೊಡಗಿನ ಜನಪ್ರಿಯ ಶಾಸಕ ಎ. ಎಸ್. ಪೊನ್ನಣ್ಣ ಅವರು ಕೈಗೆತ್ತಿಕೊಂಡು ಚಾಲನೆ ನೀಡುತ್ತಿದ್ದು, ಇದನ್ನು ಜೀರ್ಣೀಸಿಕೊಳ್ಳಲು ಸಾಧ್ಯವಾಗದ ಬಿಜೆಪಿಯವರು, ಶಾಸಕ ಪೊನ್ನಣ್ಣ ಅವರನ್ನು ಇಂಧನ ಬೆಲೆ ಏರಿಕೆ ಪ್ರತಿಭಟನೆ ನೆಪದಲ್ಲಿ ಅಣಕು ಶವಯಾತ್ರೆ ಮತ್ತು ಪ್ರತಿಕೃತಿ ದಹಿಸಿ ಅವಮಾನಿಸಿದ್ದು, ಇದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಡೆಮಾಡ ಕುಸುಮ ಜೋಯಪ್ಪ ಅವರು ಪತ್ರಿಕಾ ಹೇಳಿಕೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಮಹಿಳಾ ಕಾಂಗ್ರೆಸ್

ಮಡಿಕೇರಿ: ಎ.ಎಸ್. ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿದ ಬಿಜೆಪಿ ಕ್ರಮ ಖಂಡನೀಯವೆAದು ಕೊಡಗು ಜಿಲ್ಲಾ ಜಿಲ್ಲಾ ಮಹಿಳಾ ಕಾಂಗ್ರೆಸ್

ಮಡಿಕೇರಿ: ಎ.ಎಸ್. ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿದ ಬಿಜೆಪಿ ಕ್ರಮ ಖಂಡನೀಯವೆAದು ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಡಗು ಅತ್ಯಂತ ಪ್ರಬುದ್ಧ ರಾಜಕಾರಣಿಗಳಿಂದ ಕೂಡಿರುವ ಜಿಲ್ಲೆಯಾಗಿದೆ. ಆದರೆ ವೀರಾಜಪೇಟೆಯಲ್ಲಿ ನಡೆದ ಪ್ರತಿಭಟನೆ ಸಂದರ್ಭ ಪೊನ್ನಣ್ಣ ಅವರ ಪ್ರತಿಕೃತಿ ದಹಿಸುವ ಮೂಲಕ ಬಿಜೆಪಿ ಸಣ್ಣತನವನ್ನು ಪ್ರದರ್ಶಿಸಿದೆ ಎಂದು ಟೀಕಿಸಿದ್ದಾರೆ.

ಕ್ಷಮೆಯಾಚನೆಗೆ ಒತ್ತಾಯ

ಮಡಿಕೇರಿ: ಪ್ರತಿಭಟನೆ ವೇಳೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿರುವುದು ಖಂಡನೀಯವಾಗಿದ್ದು, ಜಿಲ್ಲಾ ಬಿಜೆಪಿ ಎ.ಎಸ್ ಪೊನ್ನಣ್ಣ ಮತ್ತು ಕೊಡಗಿನ ಜನತೆಗೆ ಬಹಿರಂಗ ಕ್ಷಮೆಯಾಚಿಸಬೇಕೆಂದು ಕೆಪಿಸಿಸಿ ಸದಸ್ಯೆ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸರಿತಾ ಪೂಣಚ್ಚ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಡಗು ಅತ್ಯಂತ ಪ್ರಬುದ್ಧ ರಾಜಕಾರಣಿಗಳಿಂದ ಕೂಡಿರುವ ಜಿಲ್ಲೆಯಾಗಿದೆ. ಆದರೆ ವೀರಾಜಪೇಟೆಯಲ್ಲಿ ನಡೆದ ಪ್ರತಿಭಟನೆ ಸಂದರ್ಭ ಪೊನ್ನಣ್ಣ ಅವರ ಪ್ರತಿಕೃತಿ ದಹಿಸುವ ಮೂಲಕ ಬಿಜೆಪಿ ಸಣ್ಣತನವನ್ನು ಪ್ರದರ್ಶಿಸಿದೆ ಎಂದು ಟೀಕಿಸಿದ್ದಾರೆ.

ಕ್ಷಮೆಯಾಚನೆಗೆ ಒತ್ತಾಯ

ಮಡಿಕೇರಿ: ಪ್ರತಿಭಟನೆ ವೇಳೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿರುವುದು ಖಂಡನೀಯವಾಗಿದ್ದು, ಜಿಲ್ಲಾ ಬಿಜೆಪಿ ಎ.ಎಸ್ ಪೊನ್ನಣ್ಣ ಮತ್ತು ಕೊಡಗಿನ ಜನತೆಗೆ ಬಹಿರಂಗ ಕ್ಷಮೆಯಾಚಿಸಬೇಕೆಂದು ಕೆಪಿಸಿಸಿ ಸದಸ್ಯೆ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸರಿತಾ ಪೂಣಚ್ಚ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರಮುಖರ ಖಂಡನೆ

ಗೋಣಿಕೊಪ್ಪ: ಕ್ಷೇತ್ರದ ಜನಪ್ರಿಯ ಶಾಸಕರಾಗಿ ಹೆಸರು ಮಾಡಿರುವ ಎ.ಎಸ್.ಪೊನ್ನಣ್ಣನವರ ಅಭಿವೃದ್ದಿ ಕಾರ್ಯವನ್ನು ಸಹಿಸಲಾರದ ವಿಕೃತ ಮನಸುಗಳು ಪ್ರತಿಭಟನೆಯ ಸಂದರ್ಭದಲ್ಲಿ ಅಣಕು ಶವಯಾತ್ರೆ ಮಾಡಿ ಪ್ರತಿಕೃತಿ ದಹಿಸುವ ಕೆಲಸವನ್ನು ಬಿಜೆಪಿಗರು ಮಾಡಿದ್ದಾರೆ. ಇದರಿಂದ ಕೊಡಗಿನ ಜನತೆ ತಲೆತಗ್ಗಿಸುವಂತೆ ಮಾಡಿದೆ. ಕೊಡಗಿನಲ್ಲಿ ಸಂಸ್ಕೃತಿಗೆ ಕೊಡಲಿ ಪೆಟ್ಟು ನೀಡಿದಂತಾಗಿದೆ.

ಬಿಜೆಪಿ ನಡೆಸಿದ ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್‌ನ ಅಧ್ಯಕ್ಷರಾದ ನಾಮೇರ ಅಂಕಿತ್, ಅಮ್ಮಕೊಡವ ಸಮಾಜದ ಪ್ರಮುಖರಾದ ಉಮೇಶ್ ಕೇಚಮಯ್ಯ ಸವಿತಾ ಸಮಾಜದ ತಾಲೂಕು ಅಧ್ಯಕ್ಷರಾದ ಮನೋಜ್, ಐರಿ ಸಮಾಜದ ಮುಖಂಡರಾದ ತಟ್ಟಂಡ ಜೋಯಪ್ಪ ಖಂಡಿಸಿದ್ದಾರೆ.

ಬAಧನಕ್ಕೆ ಆಗ್ರಹ

ಮಡಿಕೇರಿ: ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರನ್ನು ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಟಿ.ಇ. ಸುರೇಶ್ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಹಿಂದಿನ ಶಾಸಕರು ಮಾಡದ ಅಭಿವೃದ್ಧಿಯನ್ನು ಈಗಿನ ಶಾಸಕರು ಮಾಡುತ್ತಿದ್ದಾರೆ. ಇದನ್ನು ಸಹಿಸದೇ ವಿಕೃತ ಮನಸ್ಸಿನಿಂದ ಬಿಜೆಪಿಗರು ಶಾಸಕರ ಶವಯಾತ್ರೆ ಮಾಡಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಪ್ರದಾನ ಕಾರ್ಯದರ್ಶಿ ಸತೀಶ್ ಕುಮಾರ್ ಮಾತನಾಡಿ, ಬೆಲೆ ಏರಿಕೆ ಸಹಜ, ಇದನ್ನು ಖಂಡಿಸಿ ಪ್ರತಿಭಟನೆ ಮಾಡುವುದು ಹಕ್ಕು. ಆದರೆ, ಪ್ರತಿಕೃತಿ ದಹನ ಸಂಸ್ಕೃತಿ ನಮ್ಮದಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಜೆ.ಇ. ಜನಾರ್ದನ, ಸಾಮಾಜಿಕ ಜಾಲತಾಣದ ಜಿಲ್ಲಾ ಉಪಾಧ್ಯಕ್ಷ ವಿ. ಸಂದೀಪ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್‌ನ ಎಸ್‌ಟಿ ಘಟಕದ ಅಧ್ಯಕ್ಷ ಎಚ್.ಎಂ. ಮಹದೇವ್ ಉಪಸ್ಥಿತರಿದ್ದರು. ಬಂಧನಕ್ಕೆ ಆಗ್ರಹ

ಮಡಿಕೇರಿ: ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರನ್ನು ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಟಿ.ಇ. ಸುರೇಶ್ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಹಿಂದಿನ ಶಾಸಕರು ಮಾಡದ ಅಭಿವೃದ್ಧಿಯನ್ನು ಈಗಿನ ಶಾಸಕರು ಮಾಡುತ್ತಿದ್ದಾರೆ. ಇದನ್ನು ಸಹಿಸದೇ ವಿಕೃತ ಮನಸ್ಸಿನಿಂದ ಬಿಜೆಪಿಗರು ಶಾಸಕರ ಶವಯಾತ್ರೆ ಮಾಡಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಪ್ರದಾನ ಕಾರ್ಯದರ್ಶಿ ಸತೀಶ್ ಕುಮಾರ್ ಮಾತನಾಡಿ, ಬೆಲೆ ಏರಿಕೆ ಸಹಜ, ಇದನ್ನು ಖಂಡಿಸಿ ಪ್ರತಿಭಟನೆ ಮಾಡುವುದು ಹಕ್ಕು. ಆದರೆ, ಪ್ರತಿಕೃತಿ ದಹನ ಸಂಸ್ಕೃತಿ ನಮ್ಮದಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಜೆ.ಇ. ಜನಾರ್ದನ, ಸಾಮಾಜಿಕ ಜಾಲತಾಣದ ಜಿಲ್ಲಾ ಉಪಾಧ್ಯಕ್ಷ ವಿ. ಸಂದೀಪ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್‌ನ ಎಸ್‌ಟಿ ಘಟಕದ ಅಧ್ಯಕ್ಷ ಎಚ್.ಎಂ. ಮಹದೇವ್ ಉಪಸ್ಥಿತರಿದ್ದರು. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್

*ಗೋಣಿಕೊಪ್ಪ: ಶಾಸಕ ಎ.ಎಸ್. ಪೊನ್ನಣ್ಣ ಅವರ ಪ್ರತಿಕೃತಿ ದಹನ ಖಂಡನಾರ್ಹ ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಹೇಳಿದರು.

ಜಿಲ್ಲೆಯ ಸಮಸ್ಯೆ ಪರಿಹಾರಕ್ಕೆ ಶುದ್ಧ ಹಸ್ತದಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆ ಕೊಡಗಿಗೆ ಕಪ್ಪುಚುಕ್ಕೆಯಾಗಿದೆ ಎಂದು ಸುದ್ದಿಗೋಷ್ಠೀಯಲ್ಲಿ ತಿಳಿಸಿದರು.

ಪಕ್ಷದ ಮುಖಂಡರುಗಳಾದ ಪೆಮ್ಮಂಡ ಕೆ. ಪೊನ್ನಪ್ಪ, ಅಜಿತ್ ಅಯ್ಯಪ್ಪ, ಮೂಕಳೇರ ಕುಶಾಲಪ್ಪ ಖಂಡಿಸಿದರು.

ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಎ.ಜೆ. ಬಾಬು, ಕಾರ್ಯದರ್ಶಿ ಸಾದಲಿ, ಮುಖಂಡರಾದ ಭವಿನ್, ಆದಿತ್ಯ ಪೆಮ್ಮಯ್ಯ, ಗಿರೀಶ್ ಇದ್ದರು.ಕ್ಷಮೆಯಾಚನೆಗೆ ಆಗ್ರಹ

ಮಡಿಕೇರಿ: ಶಾಸಕ ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿಯನ್ನು ರಾಜಕೀಯ ದುರುದ್ದೇಶದಿಂದ ದಹಿಸಿದ ಬಿಜೆಪಿ ಮಂದಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿ ತಿಯ ಸಾಮಾಜಿಕ ಜಾಲತಾಣದ ಜಿಲ್ಲಾ ಉಪಾಧ್ಯಕ್ಷ ಆರ್.ಪಿ.ಚಂದ್ರಶೇಖರ್ ಒತ್ತಾಯಿಸಿದ್ದಾರೆ.

ಕೆಪಿಸಿಸಿ ಸದಸ್ಯ ಕೆ.ಎ. ಯಾಕುಬ್

ಮಡಿಕೇರಿ: ಶಾಸಕ ಸ್ಥಾನಕ್ಕೆ ಎಲ್ಲೂ ಚ್ಯುತಿ ಬಾರದ ರೀತಿಯಲ್ಲಿ ಜನಪರ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಅಜಾತ ಶತ್ರು ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿ ದಹಿಸುವ ಮೂಲಕ ಬಿಜೆಪಿ ಕೊಡಗಿನ ಪ್ರಬುದ್ಧ ರಾಜಕಾರಣಕ್ಕೆ ಕಳಂಕ ತಂದಿದೆ ಎಂದು ಕೆಪಿಸಿಸಿ ಸದಸ್ಯ ಕೆ.ಎ. ಯಾಕುಬ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾವುದೇ ತಪ್ಪು ಮಾಡದ, ಉತ್ತಮ ವ್ಯಕ್ತಿತ್ವದ ಜನನಾಯಕರೊಬ್ಬರನ್ನು ಗುರಿ ಮಾಡಿ ರಾಜಕೀಯ ಕಾರಣಕ್ಕಾಗಿ ಅಗೌರವ ತೋರುವುದು ಖಂಡನೀಯವೆAದು ತಿಳಿಸಿದ್ದಾರೆ.

ಅಸಮಾಧಾನ

ಸುಂಟಿಕೊಪ್ಪ: ಪೊನ್ನಣ್ಣ ಅವರ ಪ್ರತಿಕೃತಿ ದಹನ ಅಣಕು ಶವಯಾತ್ರೆಯನ್ನು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್ ತೀವ್ರವಾಗಿ ಖಂಡಿಸಿದ್ದಾರೆ.

ಅತಿರೇಕದ ಪರಮಾವಧಿ ಎಂದಿರುವ ಇವರು, ಶಾಸಕ ಪೊನ್ನಣ್ಣ ಅವರ ಅಭಿವೃದ್ಧಿ ಕಾರ್ಯಕ್ರಮವನ್ನು ಸಹಿಸಲಾಗದೆ ಅವರ ಅಣಕು ಶವಯಾತ್ರೆ ಮಾಡುವುದರ ಮೂಲಕ ಕೊಡಗಿನ ಜನರ ಸಂಸ್ಕೃತಿಗೆ ಧಕ್ಕೆ ತಂದಿರುವ ಬಿಜೆಪಿ ಜನರ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.ಅಭಿವೃದ್ಧಿ ಸಹಿಸದೆ ಪ್ರತಿಕೃತಿ ದಹನ

ಮಡಿಕೇರಿ: ಇದುವರೆಗೆ ಆಗದ ಅಭಿವೃದ್ಧಿ ಕಾರ್ಯಗಳು ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವುದನ್ನು ಸಹಿಸದ ಬಿಜೆಪಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಪ್ರತಿಕೃತಿ ದಹಿಸಿರುವುದು ಅತ್ಯಂತ ಕೀಳುಮಟ್ಟದ ಕೆಲಸ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಪಿ.ಎ ಹನೀಫ್ ಚೋಕಂಡಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಖಂಡನೆ

ಮಡಿಕೇರಿ: ಶಾಸಕ ಎ.ಎಸ್. ಪೊನ್ನಣ್ಣ ಅವರ ಪ್ರತಿಕೃತಿಯನ್ನು ದಹಿಸುವ ಮೂಲಕ ಬಿಜೆಪಿ ಕೊಡಗಿನ ಜನರ ಭಾವನೆಗೆ ಧಕ್ಕೆ ತಂದಿದೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಆರೋಪಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಜಿ.ಪೀಟರ್ ಅವರು, ಅಣುಕು ಶವಯಾತ್ರೆ ಮಾಡಿ, ಪ್ರತಿಕೃತಿ ದಹಿಸಿ ವಿಕೃತಿ ಮೆರೆಯುವುದು ಕೊಡಗಿನ ಸಂಸ್ಕೃತಿಯಲ್ಲ. ಬಿಜೆಪಿಯ ಈ ವರ್ತನೆ ಖಂಡನೀಯವೆAದು ತಿಳಿಸಿದ್ದಾರೆ.ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಖಂಡನೆ

ಮಡಿಕೇರಿ: ಶಾಸಕ ಎ.ಎಸ್. ಪೊನ್ನಣ್ಣ ಅವರ ಪ್ರತಿಕೃತಿಯನ್ನು ದಹಿಸುವ ಮೂಲಕ ಬಿಜೆಪಿ ಕೊಡಗಿನ ಜನರ ಭಾವನೆಗೆ ಧಕ್ಕೆ ತಂದಿದೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಆರೋಪಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಜಿ.ಪೀಟರ್ ಅವರು, ಅಣುಕು ಶವಯಾತ್ರೆ ಮಾಡಿ, ಪ್ರತಿಕೃತಿ ದಹಿಸಿ ವಿಕೃತಿ ಮೆರೆಯುವುದು ಕೊಡಗಿನ ಸಂಸ್ಕೃತಿಯಲ್ಲ. ಬಿಜೆಪಿಯ ಈ ವರ್ತನೆ ಖಂಡನೀಯವೆAದು ತಿಳಿಸಿದ್ದಾರೆ.