ಸಂಪಾಜೆ, ಜೂ. ೨೩: ನಿಯಂತ್ರಣ ತಪ್ಪಿದ ಕಾರು ಅಪಘಾತವಾಗಿ ಮೂವರು ಗಾಯಗೊಂಡಿರುವ ಘಟನೆ ಸಂಪಾಜೆ ಬಳಿ ನಡೆದಿದೆ. ಮೂಲತಃ ಮಂಡ್ಯದ ನಾಲ್ವರು ಫೋಟೋಗ್ರಾಫರ್ ಗಳು ಹೊನ್ನಾವರಕ್ಕೆ ತೆರಳಿ ರಾತ್ರಿ ವೋಕ್ಸ್ವ್ಯಾಗನ್ ಕಾರಿನಲ್ಲಿ ಹಿಂದಿರುಗುವ ಸಂದರ್ಭ ಸಂಪಾಜೆ ಬಳಿಯ ರಸ್ತೆ ಬದಿಯ ರಕ್ಷಣಾ ಗೋಡೆಗೆ ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ಅಳವಡಿಸಿದ್ದ ಕಬ್ಬಿಣದ ಕಂಬಿಗೆ ಕಾರು ಗುದ್ದಿದೆ. ಪರಿಣಾಮ ಕಾರಿನಲ್ಲಿದ್ದ ಪುಟ್ಟಸ್ವಾಮಿ ೩ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಎಂಬವರ ಕಾಲು ಮುರಿಯಲ್ಪಟ್ಟಿದ್ದು, ಶಶಾಂಕ್, ಸಂತೋಷ್ ಎಂಬವರುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಾರು ಚಾಲಕ ಕಿಶೋರ್ ಎಂಬವರಿಗೆ ಯಾವುದೇ ತೊಂದರೆಯಾಗಿಲ್ಲ. ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.