ಶನಿವಾರಸಂತೆ, ಜೂ.೨೩ : ಶನಿವಾರಸಂತೆ ಪಟ್ಟಣ ವ್ಯಾಪ್ತಿಯಲ್ಲಿರುವ ಅನಧಿಕೃತ ಮನೋರಂಜನ ಕ್ಲಬ್‌ಗಳನ್ನು ತಕ್ಷಣದಿಂದಲೇ ಮುಚ್ಚುವಂತೆ ಪೊಲೀಸರು ಆದೇಶ ನೀಡಿರುತ್ತಾರೆ.

ಸ್ಥಳೀಯ ಸಾರ್ವಜನಿಕರು ಮೇಲಧಿಕಾರಿಗಳಿಗೆ ದೂರು ಅರ್ಜಿಗಳನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶದನ್ವಯ ಶನಿವಾರಸಂತೆ ಪಟ್ಟಣದ ಮುಖ್ಯರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಬೈಪಾಸ್ ರಸ್ತೆ ಇತರ ಕಡೆ ಇರುವ ಕ್ಲಬ್‌ಗಳಿಗೆ ಪೊಲೀಸ್ ಠಾಣೆಯ ವೃತ್ತನಿರೀಕ್ಷಕ ಪ್ರೀತಂ, ಅಪರಾಧ ವಿಭಾಗದ ಪಿಎಸ್‌ಐ ಗೋವಿಂದ್ ರಾಜ್, ಪಿಎಸ್‌ಐ ಚಂದ್ರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಕ್ಲಬ್‌ಗಳನ್ನು ಮುಚ್ಚುವಂತೆ ಆದೇಶ ನೀಡಿದ್ದಾರೆ.