*ಗೋಣಿಕೊಪ್ಪ, ಜೂ. ೨೩: ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ತಾಲೂಕಿನ ನಾಲ್ವರು ಪತ್ರಕರ್ತರು ಭಾಜನರಾಗಿದ್ದು, ಈ ಪೈಕಿ ‘ಶಕ್ತಿ’ ೩ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
ಸAಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ತಮ್ಮ ಸೋದರ ಮಾವಂದಿರಾದ ದೇಯಂಡ ಪೂಣಚ್ಚ ಹಾಗೂ ಉಮೇಶ್ ಜ್ಞಾಪಕಾರ್ಥದ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟಗೊಂಡ ಎಂ.ಎA. ಚನ್ನನಾಯಕ ಅವರ ‘ಬಸ್ ಸೌಲಭ್ಯ ಇಲ್ಲದೆ ಬಸವಳಿದ ವಿದ್ಯಾರ್ಥಿಗಳು’ ಹಾಗೂ ಎಚ್.ಕೆ. ಜಗದೀಶ್ ಅವರ ಅರಣ್ಯ ಇಲಾಖೆಯಿಂದ ಸರಹದ್ದು ಗುರುತು ವರದಿ ಜಂಟಿಯಾಗಿ ಪಡೆದುಕೊಂಡಿದೆ.
ರಾಷ್ಟಿçÃಯ ಸಮಿತಿ ಸದಸ್ಯರಾಗಿದ್ದ ಎಸ್.ಎ. ಮುರುಳಿಧರ್ ಅವರು ಸಹೋದರ ಗಣೇಶ್ ಜ್ಞಾಪಕಾರ್ಥದ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟಗೊಂಡ ಅಣ್ಣೀರ ಹರೀಶ್ ಮಾದಪ್ಪ ಅವರ ‘ಕೌಟುಂಬಿಕ ಕೇರ್ಬಲಿ ನಮ್ಮೆ’ ವರದಿ ಪಡೆದುಕೊಂಡಿದೆ.
ವೀರಾಜಪೇಟೆ ತಾಲೂಕು ಸಂಘದ ಅಧ್ಯಕ್ಷರಾಗಿದ್ದ ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ ಅವರು ತಮ್ಮ ತಂದೆ ಸಣ್ಣುವಂಡ ಮಾದಪ್ಪ ಹಾಗೂ ತಾಯಿ ಜಾನಕಿ ಮಾದಪ್ಪ ಜ್ಞಾಪಕಾರ್ಥದ ಪರಿಸರ ಕುರಿತ ವರದಿ ಪ್ರಶಸ್ತಿಯನ್ನು ವಿಜಯ ಕರ್ನಾಟಕ ಪತ್ರಿಕೆ ವರದಿಗಾರ ಜಗದೀಶ್ ಜೋಡುಬೀಟಿ ಅವರ ‘ಸ್ಯಾನಿಟರಿ ನ್ಯಾಫ್ಕಿನ್ ಸುರಕ್ಷಿತ ವಿಲೇ ನಿಷ್ಪçಯೋಜಕ’ ವರದಿ ಪಡೆದುಕೊಂಡಿದೆ.
ಜೂನ್ ೨೯ ರಂದು ನಡೆಯಲಿರುವ ಮಹಾಸಭೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಎನ್. ದಿನೇಶ್ ತಿಳಿಸಿದ್ದಾರೆ.