ಕೂಡಿಗೆ, ಜೂ. ೨೨: ಶ್ರೀಲಂಕಾ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್-೨೦೨೪ ಕ್ರೀಡಾಕೂಟದಲ್ಲಿ ೧೫೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಕುಶಾಲನಗರ ತಾಲೂಕು ತೊರೆನೂರು ಗ್ರಾಮದ ಟಿ.ಹೆಚ್. ಗಣೇಶ್, ೪೫+ ವಯೋಮಿತಿ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ಸ್ಪರ್ಧೆಯು ಶ್ರೀಲಂಕಾದ ದಿಯಗಮ ಮಹೇಂದ್ರ ರಾಜಪಕ್ಷ ಸ್ಟೇಡಿಯಂನಲ್ಲಿ ನಡೆದ ಕ್ರೀಡಾಕೂಟದಲ್ಲಿ ಟಿ.ಹೆಚ್. ಗಣೇಶ್ ಅವರು ೧೫೦೦ ಮೀಟರ್ ಅನ್ನು ೫.೦೯ ನಿಮಿಷದಲ್ಲಿ ಕ್ರಮಿಸಿ ಈ ಸಾಧನೆ ತೋರಿದ್ದಾರೆ.