ತನಿಖಾ ವರದಿ- ಚಂದ್ರಮೋಹನ್
ಕುಶಾಲನಗರ, ಜೂ. ೨೩: ಕುಶಾಲನಗರ ಸಮೀಪದಲ್ಲಿರುವ ಜಿಲ್ಲೆಯ ಏಕೈಕ ಬೃಹತ್ ಪ್ರಮಾಣದ ಜಲಾಶಯವಾದ ಹಾರಂಗಿ ಅಣೆಕಟ್ಟು ಅಪಾಯದ ಅಂಚಿನಲ್ಲಿದೆ.
ಅಣೆಕಟ್ಟಿನ ಕೂಗಳತೆಯ ದೂರದಲ್ಲಿ ಕಳೆದ ಎರಡು ವರ್ಷಗಳಿಂದ ಕಲ್ಲುಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದ್ದು, ಇಲ್ಲಿ ನಡೆಯುವ ಸ್ಫೋಟಗಳಿಂದ ಅಣೆಕಟ್ಟಿಗೆ ಅಭದ್ರತೆ ಕಾಡುತ್ತಿದೆ. ಇದರಿಂದ ಮುಂದೆ ಉಂಟಾಗಲಿರುವ ಭಾರಿ ದೊಡ್ಡ ಪ್ರಮಾಣದ ಸಂಭವನೀಯ ಅನಾಹುತವನ್ನು ತಕ್ಷಣ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿದೆ.
ಕುಶಾಲನಗರ ಕೈಗಾರಿಕಾ ಬಡಾವಣೆಯ ಎದುರು ಭಾಗದಲ್ಲಿ ಹಾರಂಗಿ ಅಣೆಕಟ್ಟಿನ ಅಂಚಿನಲ್ಲಿ ಅತ್ತೂರು ಮೀಸಲು ಅರಣ್ಯದ ಒತ್ತಿನಲ್ಲಿ ಸುಮಾರು ಅರ್ಧ ಎಕರೆಗೂ ಜಾಸ್ತಿ ಪ್ರದೇಶದಲ್ಲಿ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಬೆಟ್ಟ ಪ್ರದೇಶದಲ್ಲಿ ಸುಮಾರು ೧೦೦ ಅಡಿಗೂ ಅಧಿಕ ಆಳದ ಕಂದಕ ಸೃಷ್ಟಿಯಾಗಿದೆ.
ಗಣಿಗಾರಿಕೆ ನಡೆಸಲು ಗಣಿ ಇಲಾಖೆ ಸೇರಿದಂತೆ ಸಂಬAಧಿಸಿದ ಸ್ಥಳೀಯ ಆಡಳಿತ ಕಲ್ಲು ಗಣಿಗಾರಿಕೆಗೆ ನಿಯಮ ಉಲ್ಲಂಘಿಸಿ ಅನುಮತಿ ನೀಡಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಅಣೆಕಟ್ಟಿನ ಸುಮಾರು ಇಪ್ಪತ್ತು ಕಿಲೋಮೀಟರ್ ಅಂತರದ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆಗಳು ನಡೆಸುವಂತಿಲ್ಲ ಎಂದು ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿದ್ದರೂ ಆದೇಶವನ್ನು ಗಾಳಿಗೆ ತೂರಿ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಅಧಿಕಾರಿಗಳು ದಿಟ್ಟ ಮೌನ ವಹಿಸಿದ್ದಾರೆ.
ಮೈಸೂರು ಸಮೀಪದ ಕೆ.ಆರ್.ಎಸ್ ಅಣೆಕಟ್ಟಿನ ಸುತ್ತಮುತ್ತ ಕಾರ್ಯಾಚರಣೆ ನಡೆಸುತ್ತಿದ್ದ ಹಲವು ಗಣಿಗಾರಿಕೆ ಕೇಂದ್ರಗಳನ್ನು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಈಗಾಗಲೇ ಸ್ಥಗಿತಗೊಳಿಸಲಾಗಿದೆ.
ಆದರೆ ಕುಶಾಲನಗರ ಪುರಸಭೆ ವ್ಯಾಪ್ತಿಯ ಈ ಪ್ರದೇಶದಲ್ಲಿ ಹಾರಂಗಿ ಅಣೆಕಟ್ಟು ಸಮೀಪ ನಿತ್ಯ ಸ್ಫೋಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಅಪಾಯದ ಸಾಧ್ಯತೆಗಳಿದ್ದರೂ ಅಣೆಕಟ್ಟು ಅಧಿಕಾರಿಗಳು, ಗಣಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಪುರಸಭೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
ಕೂಡಮಂಗಳೂರು ಗ್ರಾಮ ಪಂಚಾಯಿತಿಯಲ್ಲಿ ಈ ಬಗ್ಗೆ ಸದಸ್ಯೆ ಜೆ. ಫಿಲೋಮಿನಾ ಅವರು ತಕರಾರು ಎತ್ತಿದ್ದರೂ ಹಿಂದಿನ ಆಡಳಿತ ಮಂಡಳಿ ನಿಯಮ ಉಲ್ಲಂಘಿಸಿ ಅನುಮತಿ ನೀಡಿರುವ ಆರೋಪಗಳು ಕೇಳಿ ಬಂದಿವೆ.
ಗಣಿ ಇಲಾಖೆ ಅಧಿಕಾರಿಗಳು ಗಣಿಗಾರಿಕೆ ನಡೆಸುವ ಮಾಲೀಕರಿಗೆ ಅಗತ್ಯವಿರುವ ದಾಖಲೆಗಳನ್ನು ನೀಡಿದ್ದಾರೆ ಎಂದು ಸ್ಥಳಕ್ಕೆ ೩ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ತೆರಳಿದ ‘ಶಕ್ತಿ’ಗೆ ಸಂಬAಧಿಸಿದ ವ್ಯಕ್ತಿಗಳಿಂದ ಪ್ರತಿಕ್ರಿಯೆ ಲಭಿಸಿದೆ.
ಹಾರಂಗಿ ಅಣೆಕಟ್ಟಿನಿಂದ ನೇರವಾಗಿ ಒಂದು ಕಿಲೋಮೀಟರ್ ಅಂತರದಲ್ಲಿ ಈ ಕಲ್ಲು ಗಣಿಗಾರಿಕೆ ಸ್ಫೋಟಕ ನಡೆಯುತ್ತಿದ್ದು, ಅಣೆಕಟ್ಟು ಅಧಿಕಾರಿಗಳು ಕೂಡ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಮೌನಕ್ಕೆ ಜಾರಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎನ್ನುತ್ತಾರೆ ಸ್ಥಳೀಯರು.
ಈ ಕಲ್ಲು ಗಣಿಗಾರಿಕಾ ಕೇಂದ್ರದಲ್ಲಿ ನಡೆಯುವ ಸ್ಪೋಟಗಳಿಂದ ಭೂಮಿ ನಡುಗುವ ಮೂಲಕ ಸಮೀಪದ ಅಣೆಕಟ್ಟಿಗೆ ಅಪಾಯ ಉಂಟಾಗುವುದAತೂ ಖಚಿತ. ಗಣಿಗಾರಿಕಾ ಕೇಂದ್ರದ ಒಂದು ಬದಿಯಲ್ಲಿ ಅತ್ತೂರು ಮೀಸಲು ಅರಣ್ಯ ಇದ್ದು, ಇಲ್ಲಿ ಕಾಡಾನೆಗಳು ವನ್ಯಜೀವಿಗಳು ಓಡಾಡುವ ಪ್ರದೇಶವಾಗಿದೆ.
ಈ ಬಗ್ಗೆ ಅರಣ್ಯ ಅಧಿಕಾರಿಗಳು ಕೂಡ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾಗಿದೆ. ಈ ವ್ಯಾಪ್ತಿಯ ಅರಣ್ಯದಿಂದ ಆನೆಗಳು ಸಮೀಪದ ಖಾಸಗಿ ಹೊಲ, ಗದ್ದೆಗಳಿಗೆ ನುಗ್ಗಿ ಹಾನಿ ಮಾಡುತ್ತಿರುವ ಬಗ್ಗೆ ದೂರುಗಳು ಆಗಾಗ ಕೇಳಿ ಬರುತ್ತಿವೆ.
ಅಣೆಕಟ್ಟಿನ ೨೦ ಕಿಲೋ ಮೀಟರ್ ಅಂತರದಲ್ಲಿ ಇದೇ ರೀತಿಯಲ್ಲಿ ಹೊಸಕೋಟೆ ಯಲಕನೂರು ಮುಂತಾದ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಗಣಿಗಾರಿಕೆ ನಡೆಯುತ್ತಿದ್ದರೂ ಸಂಬAಧಿಸಿದ ಇಲಾಖೆಗಳು ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಉಚ್ಚ ನ್ಯಾಯಾಲಯದ ಆದೇಶ ಈ ವ್ಯಾಪ್ತಿಯಲ್ಲಿ ಉಲ್ಲಂಘನೆ ಆಗುತ್ತಿದ್ದು ಅಧಿಕಾರಿಗಳು ತಲೆಕೆಡಿಸಿಕೊಂಡAತಿಲ್ಲ.
ಕಲ್ಲು ಗಣಿಗಾರಿಕಾ ಕೇಂದ್ರದಿAದ ಮುಂದಿನ ದಿನಗಳಲ್ಲಿ ಅಣೆಕಟ್ಟು ಮತ್ತು ಸಮೀಪದ ಮೀಸಲು ಅರಣ್ಯದ ವನ್ಯಜೀವಿಗಳಿಗೆ ಉಂಟಾಗುವ ಸಂಭಾವ್ಯ ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ತಕ್ಷಣ ಗಮನಹರಿಸಬೇಕಾಗಿದೆ.