ಸೋಮವಾರಪೇಟೆ: ಸಮೀಪದ ನಂದಿಗುAದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ, ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ದಾನಿಗಳ ನೆರವಿನಿಂದ ಉಚಿತ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.
ಶಾಲಾ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಲೆಯ ೨೭ ವಿದ್ಯಾರ್ಥಿಗಳಿಗೆ ಎಲ್.ಐ.ಸಿ. ಉದ್ಯೋಗಿ ಚೆನ್ನಯ್ಯ ಅವರು ಉಚಿತವಾಗಿ ಪುಸ್ತಕಗಳನ್ನು ವಿತರಿಸಿದರು. ನಂತರ ಮಾತನಾಡಿದ ಅವರು, ಕಳೆದ ೫೦ ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ತಾನೂ ಸಹ ವ್ಯಾಸಂಗ ಮಾಡಿದ್ದು, ಸರ್ಕಾರಿ ಶಾಲೆಗಳಲ್ಲಿ ಇಂದಿಗೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು. ಈ ಸಂದರ್ಭ ಉಪಸ್ಥಿತರಿದ್ದ ಕೆಂಪೇಗೌಡ ಆಸ್ಪತ್ರೆಯ ವೈದ್ಯ ಸಂಪತ್ ಅವರು, ಮಕ್ಕಳಿಗೆ ಆರೋಗ್ಯ ರಕ್ಷಣೆ, ಪರಿಸರ ರಕ್ಷಣೆಯ ಮಹತ್ವದ ಬಗ್ಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಶಾಲಾ ಮುಖ್ಯೋಪಾಧ್ಯಾಯ ಗಣಪತಿ ಸೇರಿದಂತೆ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.
ಕಾಂಡನಕೊಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಿಕೇರಿ: ಕಾಂಡನಕೊಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಅವಿರತ ಪ್ರತಿಷ್ಠಾನ ಸಂಸ್ಥೆ ವತಿಯಿಂದ ಉಚಿತವಾಗಿ ನೋಟ್ ಪುಸ್ತಕಗಳನ್ನು ಹಾಗೂ ಲೇಖನಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಸಂಸ್ಥೆಯು ಪ್ರತಿ ವರ್ಷವು ಶಾಲೆಯ ವಿದ್ಯಾರ್ಥಿಗಳಿಗೆ ಕೊಡುಗೆ ನೀಡುತ್ತಿದ್ದು, ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಈ ಸಂದರ್ಭ ಶಾಲೆಯ ಶಿಕ್ಷಕರು, ಸಂಸ್ಥೆಯ ಪ್ರಮುಖರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಕೊಂಡAಗೇರಿ ಪ್ರಾಥಮಿಕ-ಪ್ರೌಢಶಾಲೆ ಮಡಿಕೇರಿ: ಕಾಂಡನಕೊಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಅವಿರತ ಪ್ರತಿಷ್ಠಾನ ಸಂಸ್ಥೆ ವತಿಯಿಂದ ಉಚಿತವಾಗಿ ನೋಟ್ ಪುಸ್ತಕಗಳನ್ನು ಹಾಗೂ ಲೇಖನಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಸಂಸ್ಥೆಯು ಪ್ರತಿ ವರ್ಷವು ಶಾಲೆಯ ವಿದ್ಯಾರ್ಥಿಗಳಿಗೆ ಕೊಡುಗೆ ನೀಡುತ್ತಿದ್ದು, ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಈ ಸಂದರ್ಭ ಶಾಲೆಯ ಶಿಕ್ಷಕರು, ಸಂಸ್ಥೆಯ ಪ್ರಮುಖರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಕೊಂಡAಗೇರಿ ಪ್ರಾಥಮಿಕ-ಪ್ರೌಢಶಾಲೆ ಮಡಿಕೇರಿ: ಕೊಂಡAಗೇರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಬಡ ವಿದ್ಯಾರ್ಥಿಗಳಿಗೆ ಜಿಲ್ಲಾ ಜೆ.ಡಿ.ಎಸ್. ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಜಿ. ಜಾಶಿರ್ ಮೂರ್ನಾಡು ಹಾಗೂ ಕೊಂಡAಗೇರಿ ಜೆ.ಡಿ.ಎಸ್. ಮುಖಂಡ ನಜೀರ್ ಆಲಿ ಅವರು ಪುಸ್ತಕಗಳನ್ನು ವಿತರಿಸಿದರು.
ಸುಮಾರು ರೂ. ೨೫ ಸಾವಿರ ವೆಚ್ಚದಲ್ಲಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಪುಸ್ತಕಗಳನ್ನು ನೀಡಲಾಗಿದೆ ಎಂದು ಜಾಶಿರ್ ತಿಳಿಸಿದರು. ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಈ ಸಂದರ್ಭ ಉಪಸ್ಥಿತರಿದ್ದರು.
ವಾಟೆಕಾಡು ಸ.ಹಿ.ಪ್ರಾ. ಶಾಲೆ ನಾಪೋಕ್ಲು: ಇಲ್ಲಿಗೆ ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿಯ ವಾಟೆಕಾಡು ಸ.ಹಿ.ಪ್ರಾ. ಶಾಲೆ ಮಕ್ಕಳಿಗೆ ಜನಶಕ್ತಿ ಸಂಸ್ಥೆ ಬೆಂಗಳೂರಿನ ರಾಜ್ಯ ಕಾರ್ಯದರ್ಶಿ ಹೇಮಂತ್ ನೋಟ್ ಪುಸ್ತಕವನ್ನು ಸಂಸ್ಥೆಯ ವತಿಯಿಂದ ಕೊಡುಗೆ ನೀಡಿದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ಜುಬೆರಿಯ ಇವರ ಉಪಸ್ಥಿತಿಯಲ್ಲಿ ಪಾಲೆಮಾಡು ಭೂಮಿ ಮತ್ತು ಹಕ್ಕು ವಂಚಿತ ಹೋರಾಟಗಾರರ ಸಮಿತಿಯ ಅಧ್ಯಕ್ಷರು ಹಾಗೂ ಹೊದ್ದೂರು ಗ್ರಾಮ ಪಂಚಾಯಿತಿ ಮತ್ತು ಶಾಲಾ ಎಸ್. ಡಿ.ಎಂ.ಸಿ. ಸದಸ್ಯ ಮೊಣ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯೆ ಕುಸುಮ ಹಾಗೂ ಸಮೂಹ ಸಂಪನ್ಮೂನ ವ್ಯಕ್ತಿಗಳಾದ ಉಷಾ ಇವರು ವಿತರಿಸಿದರು.
ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಕುಮಾರಸ್ವಾಮಿ ಹಾಗೂ ಶಿಕ್ಷಕ ವೃಂದ ಹಾಜರಿದ್ದರು.
ನಾಲಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಪೋಕ್ಲು: ಸಮೀಪದ ಕಕ್ಕಬೆಯ ನಾಲಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಮದ ಪರದಂಡ ವಿಠಲ, ಕೋಡಿಮಣಿಯಂಡ ರವಿ ಹಾಗೂ ಪಟ್ಟೆಮನೆ ಕೃಷ್ಣ ನೋಟ್ ಪುಸ್ತಕವನ್ನು ನೀಡಿದರು. ಮುಖ್ಯ ಶಿಕ್ಷಕಿ ಎಂ.ಹೆಚ್ ರಝಿನ, ಅತಿಥಿ ಶಿಕ್ಷಕರಾದ ಕೆ.ಪಿ. ಗೌರಮ್ಮ, ಬಿ.ಎಸ್. ಶಾರಿಕ ಹಾಜರಿದ್ದರು.