ಮಡಿಕೇರಿ, ಜೂ.೨೨: ತೈಲ ಬೆಲೆ ಏರಿಕೆ ವಿರುದ್ಧ ಬಿಜೆಪಿಯವರು ವೀರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭ ಶಾಸಕ ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿರುವುದು ಕೊಡವ ಜನಾಂಗದವರಿಗೆ ನೋವಾಗಿದೆ. ಈ ಪ್ರತಿಭ ಟನೆಯಲ್ಲಿ ಭಾಗಿಯಾಗಿರುವ ಬಿಜೆಪಿ ಪಕ್ಷದ ಕೊಡವ ಮಹಿಳೆಯರೂ ಸೇರಿದಂತೆ ಕೊಡವ ಪುರುಷರು ಜಿಲ್ಲೆಯ ಜನತೆಯ ಕ್ಷಮೆಯಾಚಿಸಬೇಕೆಂದು ಮಾಜಿ ಶಾಸಕಿ ಶಾಂತೆಯAಡ ವೀಣಾ ಅಚ್ಚಯ್ಯ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾನು ಓರ್ವ ಕೊಡವತಿಯಾಗಿ ಈ ಘಟನೆಯನ್ನು ಖಂಡಿಸುತ್ತೇನೆ.
(ಮೊದಲ ಪುಟದಿಂದ) ಕೊಡವ ಜನಾಂಗಕ್ಕೆ ಇತಿಹಾಸವಿದೆ, ಪದ್ಧತಿ, ಪರಂಪರೆಯಿದೆ. ಶವ ಸಂಸ್ಕಾರ ಮಾಡುವುದಕ್ಕೂ ಒಂದು ಪದ್ಧತಿಯಿದೆ, ಹಾದಿ, ಬೀದಿಯಲ್ಲಿ ಸುಡುವುದಲ್ಲ. ಅಂತಹದ್ದರಲ್ಲಿ ಬಿಜೆಪಿಯ ಕೆಲವು ಕೊಡವರ ಮನಸ್ಥಿತಿ ನೆನೆದರೆ ಆಶ್ಚರ್ಯವಾಗುತ್ತದೆ. ಕೊಡಗಿನ ಇತಿಹಾಸದಲ್ಲಿ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಈ ಪ್ರಕರಣವನ್ನು ಜಿಲ್ಲೆಯ ಜನತೆ ಜಾತಿ, ಬೇಧ ಮರೆತು ಖಂಡಿಸುತ್ತಿದ್ದಾರೆ. ಕೆಲವು ಬಿಜೆಪಿಯವರು ಕೂಡ ಖಂಡಿಸುತ್ತಿದ್ದಾರೆ. ಇದು ಬಿಜೆಪಿಯ ಅವನತಿಗೆ ಹಾದಿ ಕಲ್ಪಿಸಿಕೊಟ್ಟಂತಾಗಿದೆ ಎಂದು ಹೇಳಿದರು.
ಪ್ರತಿಭಟನೆ ಎಲ್ಲರ ಹಕ್ಕು, ಆದರೆ, ಈ ರೀತಿಯ ಪರಿಸ್ಥಿತಿ ಕೊಡಗಿನ ಇತಿಹಾಸದಲ್ಲಿ ನಡೆದಿಲ್ಲ. ಅದರಲ್ಲೂ ವಿಧಾನಪರಿಷತ್ ಸದಸ್ಯರಾಗಿರುವ, ಜನತೆಯ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸುಜಾ ಕುಶಾಲಪ್ಪ ಪ್ರತಿಭಟನೆಯಲ್ಲಿ ಭಾಗಿಯಾಗಿರುವದು ಬೇಸರದ ಸಂಗತಿ. ಆದರೆ, ಮಾಜಿ ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಸುನಿಲ್ ಸುಬ್ರಮಣಿ ಅವರುಗಳು ಪ್ರತಿಭಟನೆಯಲ್ಲಿ ಭಾಗಿಯಾಗದೆ ಗೌರವದಿಂದ ನಡೆದುಕೊಂಡಿದ್ದಾರೆ. ಅವರನ್ನು ಅಭಿನಂದಿಸುವುದಾಗಿ ಹೇಳಿದರು. ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯ ಈರ್ವರು ಶಾಸಕರು ಸಾಕಷ್ಟು ಜನಪರ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಜನರ ಸಮಸ್ಯೆ ಅರಿತುಕೊಂಡು ಪರಿಹರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿ ವಾರಕ್ಕೊಮ್ಮೆ ಸಂಬAಧಿಸಿದ ಸಚಿವರುಗಳನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಬಿಜೆಪಿಯವರಿಗೆ ಅಸೂಯೆಯುಂಟಾಗಿ ಈ ರೀತಿಯ ವರ್ತನೆ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಇರುತ್ತದೆ. ನಂತರದಲ್ಲಿ ಎಲ್ಲರಿಗಾಗಿ ಕೆಲಸ ಮಾಡಬೇಕಿದೆ. ಈ ರೀತಿಯ ವರ್ತನೆ ತೋರಿದ ಬಿಜೆಪಿಯವರಿಗೆ ಶಾಸಕರ ಬಳಿ ತೆರಳಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.