ಸೋಮವಾರಪೇಟೆ, ಜೂ.೨೩ : ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೋಟೆ ಬೆಟ್ಟ ರಸ್ತೆಯಲ್ಲಿ ಪ್ರವಾಸಿಗರ ಕಾರನ್ನು ತಡೆದು ಹಲ್ಲೆ ಮಾಡಿರುವ ಘಟನೆಗೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಪುತ್ತೂರಿನ ಕುಟುಂಬವೊAದು ಎರಡು ಕಾರುಗಳಲ್ಲಿ ಮಡಿಕೇರಿಗೆ ಆಗಮಿಸಿ, ಅಲ್ಲಿಂದ ಕೋಟೆ ಬೆಟ್ಟಕ್ಕೆ ತೆರಳುತ್ತಿದ್ದ ಸಂದರ್ಭ, ರಸ್ತೆಯಲ್ಲಿ ಜಾಗ ಬಿಡಲಿಲ್ಲ ಎಂಬ ವಿಚಾರಕ್ಕೆ ಸಂಬAಧಿಸಿದAತೆ ಕಾರು ಚಾಲಕರು ಮತ್ತು ದ್ವಿಚಕ್ರ ವಾಹನ ಸವಾರರ ನಡುವೆ ವಾಗ್ವಾದ ಏರ್ಪಟ್ಟಿದ್ದು, ಈ ಸಂದರ್ಭ ಬೈಕ್ ಸವಾರರು ಕೈ ಮತ್ತು ಹೆಲ್ಮೆಟ್‌ನಿಂದ ಹಲ್ಲೆ ನಡೆಸಿರುವುದಾಗಿ ಪೊಲೀಸ್ ದೂರು ನೀಡಲಾಗಿದೆ.

ಇಂದು ಬೆಳಿಗ್ಗೆ ಕೋಟೆ ಬೆಟ್ಟಕ್ಕೆ ಎರಡು ಕಾರಿನಲ್ಲಿ ತೆರಳುತ್ತಿದ್ದ ಪುತ್ತೂರಿನ ಹಕೀಂ ಸೇರಿದಂತೆ ೮ ಮಂದಿಯನ್ನು ರಸ್ತೆ ತಡೆದು ಹಲ್ಲೆ ನಡೆಸಿದ ಆರೋಪದ ಮೇರೆ ಗರ್ವಾಲೆ ಗ್ರಾಮದ ಈರ್ವರು ಯುವಕರ ಮೇಲೆ ಮೊಕದ್ದಮೆ ದಾಖಲಾಗಿದೆ.

ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಯಮಹ ಎಫ್.ಜೆಡ್. ಬೈಕಿನಲ್ಲಿ ಬಂದ ಈರ್ವರು ರಸ್ತೆಗೆ ಅಡ್ಡಹಾಕಿ, ಜಾಗ ಬಿಡುವ ವಿಚಾರಕ್ಕೆ ಸಂಬAಧಿಸಿದAತೆ ಜಗಳ ತೆಗೆದು, ನಮ್ಮ ಬೈಕ್‌ಗೆ ಕಾರನ್ನು ಡಿಕ್ಕಿಪಡಿಸಿದ್ದೀರಾ.. ಎಂದು ಪ್ರಶ್ನಿಸಿ, ಹೆಲ್ಮೆಟ್‌ನಿಂದ ಹಲ್ಲೆ ನಡೆಸಿರುವುದಾಗಿ ಕಾರಿನಲ್ಲಿದ್ದ ಮುಬೀನಾ ಎಂಬವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಈರ್ವರು ಅಪರಿಚಿತ ಯುವಕರ ಮೇಲೆ ಮೊಕದ್ದಮೆ ದಾಖಲಾಗಿದ್ದು, ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹಾದೇವ ಸೇರಿದಂತೆ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಹಲ್ಲೆ ಘಟನೆಗೆ ಸಂಬAಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ. ಪೊಲೀಸರ ತನಿಖೆಯಿಂದಷ್ಟೇ ಆರೋಪಿಗಳ ಸ್ಪಷ್ಟ ಮಾಹಿತಿ ತಿಳಿದು ಬರಬೇಕಿದೆ.

ಪೊಲೀಸ್ ಇಲಾಖೆ ಸ್ಪಷ್ಟನೆ

ಘಟನೆಗೆ ಸಂಬAಧಿಸಿದAತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಷಯ ಕುರಿತು ಸ್ಪಷ್ಟನೆ ನೀಡಿರುವ ಪೊಲೀಸ್ ಇಲಾಖೆ ಮಹಿಳೆ ಧರಿಸಿದ್ದ ಚಿನ್ನದ ಸರ ಘಟನೆ ವೇಳೆಯಲ್ಲಿ ಆಕೆಗೆ ತಿಳಿಯದಂತೆ ಬಿದ್ದು ಹೋಗಿದ್ದು, ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸರ ಕಿತ್ತುಕೊಳ್ಳುವ ಉದ್ದೇಶದಿಂದ ಗಲಾಟೆ ನಡೆದಿದೆ ಎಂಬುದು ಸುಳ್ಳು ಎಂದು ಪ್ರಕಟಣೆ ಮೂಲಕ ಇಲಾಖೆ ಸ್ಪಷ್ಟಪಡಿಸಿದೆ.