ಕಾರ್ಯಕ್ರಮಗಳನ್ನು ರೂಪಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪರಿಷತ್ತು ರೂಪಿಸುವ ಕಾರ್ಯಕ್ರಮಗಳ ಮೂಲಕ ಬಾಂಧವ್ಯ ಗಟ್ಟಿಯಾಗಬೇಕು ಎಂದರು. ಸಮಿತಿ ಸದಸ್ಯರಾದ ಸುಶೀಲ ಕುಶಾಲಪ್ಪ, ತಮ್ಮಯ್ಯ, ಪರಿಷತ್ತಿನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಾಧಿಕಾ ವಿಶ್ವನಾಥ್ ‘ಹಸಿರೂರ ಸಿಂಗಾರಿ’ ಕವನವಾಚನದ ಮೂಲಕ ಪ್ರಥಮ ಬಹುಮಾನ ಗಳಿಸಿದರು. ‘ಸುಕೃತವು ನಮ್ಮದು’ ಕವನ ವಾಚಿಸಿದ ವೈಲೇಶ್ ಪಿ.ಎಸ್. ದ್ವಿತೀಯ ಸ್ಥಾನ ಪಡೆದರು. ಪರಿಸರದ ರಕ್ಷಣೆ ಕವನದ ಮೂಲಕ ಸುಶೀಲ ಕುಶಾಲಪ್ಪ ತೃತೀಯ ಸ್ಥಾನ ಪಡೆದರು. ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಕವಿ- ಕವಯತ್ರಿಯರಿಗೆ ಪ್ರಶಂಸನಾ ಪತ್ರ ಹಾಗೂ ಸ್ಮರಣಿಕೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಹಕಾರ್ಯದರ್ಶಿ ಚಂದನ್ ನಂದರಬೆಟ್ಟು, ಮಕ್ಕಳ ಪ್ರಕಾರ ಪ್ರಮುಖ್ ಹೇಮಂತ್ ಪಾರೇರ, ಜಿಲ್ಲಾ ಸಮಿತಿ ಸದಸ್ಯರಾದ ಜಾನಕಿ ಮಾಚಯ್ಯ, ಕಡ್ಲೇರ ಆಶಾ ಧರ್ಮಪಾಲ್, ಪ್ರೀತಿ ಡಿಸೋಜಾ ಕಾರ್ಯಕ್ರಮದಲ್ಲಿ ಹಾಜರಿದ್ದರು. ಮೂಲಕ ಎಚ್ಚರಿಕೆಯನ್ನು ನೀಡಿದ್ದರೂ ಅಶ್ಲೀಲ ಸಂದೇಶಗಳು ಬರುತ್ತಿದ್ದವು. ವ್ಯಕ್ತಿ ಯಾರು ಎಂಬುದು ಪತ್ತೆ ಹಚ್ಚುವ ಸಲುವಾಗಿ ಯುವತಿ ಹಾಗೂ ಆಕೆಯ ಸ್ನೇಹಿತರು ಸೇರಿ ಆತನನ್ನು ಹುಣಸೂರಿಗೆ ಬರುವಂತೆ ಹೇಳಿದ್ದಾರೆ. ಅಬೂಬಕ್ಕರ್ ಹುಣಸೂರಿಗೆ ತೆರಳಿ ಯುವತಿಗಾಗಿ ಕಾದುಕುಳಿತ್ತಿದ್ದನು.
ಯುವತಿ ಬಸ್ಸಿನಲ್ಲಿ ಹಾಗೂ ಆಕೆಯ ಸ್ನೇಹಿತರು ವಾಹನದಲ್ಲಿ ಹಿಂಬಾಲಿಸಿದ್ದರು. ಹುಣಸೂರಿನ ಬಸ್ ನಿಲ್ದಾಣಕ್ಕೆ ತೆರಳಿದ ಯುವತಿಗೆ ಅನಾಮಧೇಯ ಸಂಖ್ಯೆಯಿAದ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ವ್ಯಕ್ತಿ ತನ್ನ ಮೊಬೈಲ್ ರಿಪೇರಿ ಮಾಡಿದ ಮೊಬೈಲ್ ಅಂಗಡಿಯ ಅಬೂಬಕ್ಕರ್ ಎಂದು ಗುರುತಿಸಿದಳು. ಕೂಡಲೇ ಸ್ಥಳಕ್ಕೆ ಆಗಮಿಸಿದ ಆಕೆಯ ಸ್ನೇಹಿತರು ಆತನನ್ನು ಹುಣಸೂರು ಪೊಲೀಸ್ ಠಾಣೆಗೆ ಒಪ್ಪಿಸಿ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಹುಣಸೂರು ಪೊಲೀಸರು ಆರೋಪಿ ಅಬೂಬಕ್ಕರ್ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಸಂಧರ್ಭದಲ್ಲಿ ಹುಣಸೂರು ಪಟ್ಟಣ ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಶ್ಯಪ್, ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ, ಸಿಬ್ಬಂದಿಗಳು ಹಾಜರಿದ್ದರು.
-ವಾಸು ಎ.ಎನ್.