ಪೊನ್ನಂಪೇಟೆ, ಜೂ. ೨೧: ಹೆಣ್ಣು ಜಾನಪದ ಸಾಹಿತ್ಯ ರಚನೆಗೆ ಸ್ಫೂರ್ತಿಯಾಗಿ, ಗಂಡಿಗೆ ಶಕ್ತಿಯಾಗಿದ್ದಳು ಎಂದು ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಕಾವೇರಿ ಹೇಳಿದರು.ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ, ‘ಜಾನಪದ ಸಾಹಿತ್ಯದಲ್ಲಿ ಸ್ತಿçÃ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಂಡಿಗೆ ಸರಿ ಸಮಾನವಾಗಿ ಹೊಲ ಗದ್ದೆಗಳಲ್ಲಿ ದುಡಿದು, ಮನೆಯ ಜವಾಬ್ದಾರಿಯನ್ನು ಹೊತ್ತು ಕುಟುಂಬ ನಿರ್ವಹಣೆಯಲ್ಲಿ ಹೆಣ್ಣು ಮೇಲುಗೈ ಸಾಧಿಸಿದ್ದಾಳೆ. ಧಾರ್ಮಿಕ ಆಚರಣೆಗಳಲ್ಲಿ, ಸಭೆ ಸಮಾರಂಭ ನಿರ್ವಹಿಸುವಲ್ಲಿ ಹೆಣ್ಣಿನ ಪಾತ್ರ ಪ್ರಮುಖವಾಗಿದೆ. ಅನೇಕ ಜಾನಪದ ಗೀತೆಗಳಲ್ಲಿ ಹೆಣ್ಣಿನ ತ್ಯಾಗ, ನಿಷ್ಠೆ, ಧೈರ್ಯವನ್ನು ಅಭಿವ್ಯಕ್ತಿಸಲಾಗಿದೆ. ದಾಂಪತ್ಯದಲ್ಲಿ ಹೆಣ್ಣಿನ ಉದಾರತೆಯನ್ನು ಜಾನಪದ ಗೀತೆಗಳು ತಿಳಿಸುತ್ತವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲ ಡಾ. ದಯಾನಂದ್ ಕೆ.ಸಿ. ಮಾತನಾಡಿ, ಜಾನಪದವು ಸಾಹಿತ್ಯದ ಮೂಲ ಬೇರು ಮತ್ತು ಪ್ರೇರಣೆ ಆಗಿದೆ ಎಂದರು. ಕನ್ನಡ ವಿಭಾಗ ಮುಖ್ಯಸ್ಥ ಡಾ. ಬಸವರಾಜು ಕೆ. ಪ್ರಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ರಘುರಾಜ್ ಸ್ವಾಗತಿಸಿ, ವಿದ್ಯಾರ್ಥಿ ಅಜಿತ್ ನಿರೂಪಿಸಿ, ಡಾ. ಪ್ರಭು ವಂದಿಸಿದರು.