ಮುಳ್ಳೂರು, ಜೂ. ೨೧: ಸಮೀಪದ ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಪ್ಪಂದಿರ ದಿನವನ್ನು ಸಡಗರ ಸಂಭ್ರಮದಿAದ ಆಚರಿಸಲಾಯಿತು. ಫಾದರ್ ಡೇ ಅಂಗವಾಗಿ ಐದರಿಂದ ಹತ್ತನೆ ತರಗತಿ ವಿದ್ಯಾರ್ಥಿಗಳು ಅಪ್ಪನ ಬಗ್ಗೆ ಪ್ರಬಂಧ ಬರೆದರು. ಪ್ರಿಕೆಜಿಯಿಂದ ೪ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಅವರ ಕೈಯಿಂದಲೆ ಅವರವರ ಅಪ್ಪನಿಗೆ ‘ಕ್ರಾಫ್ಟ್ ವರ್ಕ್’ ಮೂಲಕ ಗ್ರೀಟಿಂಗ್ಸ್ ಕಾರ್ಡ್ ತಯಾರಿಸಿದರು. ಈ ಸಂದರ್ಭ ಶಾಲಾ ಶಿಕ್ಷಕರು, ಆಡಳಿತ ಮಂಡಳಿಯವರು, ವಿದ್ಯಾರ್ಥಿಗಳು ಇದ್ದರು.