ಸಿದ್ದಾಪುರ, ಜೂ. ೨೧: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ರಾಜ್ಯ ಸರ್ಕಾರ ಏರಿಸಿರುವುದನ್ನು ಖಂಡಿಸಿ ಸಿದ್ದಾಪುರದ ಸಿಪಿಐಎಂ ಪಕ್ಷದ ಗ್ರಾಮ ಸಮಿತಿ ವತಿಯಿಂದ ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಿಐಎಂ ಪಕ್ಷದ ಮುಖಂಡ ಎಚ್.ಬಿ. ರಮೇಶ್ ಮಾತನಾಡಿ, ರಾಜ್ಯ ಸರ್ಕಾರ ಇಂಧನದ ಬೆಲೆಗಳನ್ನು ದಿಢೀರನೆ ಏರಿಕೆ ಮಾಡಿರುವುದು ಖಂಡನೀಯ. ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು ಪೆಟ್ರೋಲ್ ಡೀಸೆಲ್ ಬೆಲೆಯಿಂದಾಗಿ ಜನಸಾಮಾನ್ಯರಿಗೆ ಗಾಯದ ಮೇಲೆ ಹೆಚ್ಚಿನ ಹೊರೆ ಆಗಿದ್ದು, ಬಡವರ ಜೀವನ ದುಸ್ತರವಾಗಿದೆ ಎಂದು ಆರೋಪಿಸಿದರು. ಕೂಡಲೇ ರಾಜ್ಯ ಸರ್ಕಾರ ಏರಿಸಿರುವ ಬೆಲೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಪ್ರಮುಖರಾದ ಎನ್. ಡಿ. ಕುಟ್ಟಪ್ಪನ್, ಸಿ.ಯು. ಮುಸ್ತಾಫ, ಅನಿಲ್ ಕುಟ್ಟಪ್ಪ, ಇನ್ನಿತರರು ಭಾಗವಹಿಸಿದ್ದರು