ಸೋಮವಾರಪೇಟೆ, ಜೂ. ೨೧ : ಅಡುಗೆ ಕೋಣೆಯ ಒಲೆಗೆ ಹಾಕಿದ್ದ ಬೆಂಕಿ ಇಡೀ ಮನೆಯನ್ನೇ ಸುಟ್ಟಿರುವ ಘಟನೆ ಸಮೀಪದ ಹಾನಗಲ್ಲು ಗ್ರಾಮದ ಸಿದ್ಧಾರ್ಥ ಬಡಾವಣೆಯಲ್ಲಿ ಇಂದು ಸಂಭವಿಸಿದೆ.
ಸಿದ್ದಾರ್ಥ ಬಡಾವಣೆಯ ಲೀಲಾವತಿ ಎಂಬವರಿಗೆ ಸೇರಿದ ವಾಸದ ಮನೆ ಆಕಸ್ಮಿಕ ಅಗ್ನಿ ಅವಘಡಕ್ಕೆ ಸುಟ್ಟು ಕರಕಲಾಗಿದೆ. ಇಂದು ಮಧ್ಯಾಹ್ನ ಲೀಲಾವತಿ ಅವರು ಮನೆಯ ಅನತಿ ದೂರದಲ್ಲಿ ಕೆಲಸ ಮಾಡಿಕೊಂಡಿದ್ದು, ಸೊಸೆ ಸುಮ ಅವರು ಮನೆಯಲ್ಲಿದ್ದರು. ಅಡುಗೆ ಕೋಣೆಯ ಒಲೆಗೆ ಸೌದೆ ಹಾಕಿ ಬೆಂಕಿ ಹಚ್ಚಿ ಹೊರ ಬಂದಿದ್ದು, ಈ ಸಂದರ್ಭ ಆಕಸ್ಮಿಕವಾಗಿ ಬೆಂಕಿ ಹರಡಿ ಮನೆ ಸಂಪೂರ್ಣ ಸುಟ್ಟು ಹೋಗಿದೆ.
ಬೆಂಕಿ ಅವಘಡಕ್ಕೆ ಮನೆಯೊಳಗಿದ್ದ ಟಿ.ವಿ., ಫ್ರಿಡ್ಜ್ ಸೇರಿದಂತೆ ಎಲೆಕ್ಟಾçನಿಕ್ ಉಪಕರಣಗಳು, ಮರದ ಪೀಠೋಪಕರಣಗಳು, ಬಟ್ಟೆ, ಬರೆ, ಛಾವಣಿ ಸೇರಿದಂತೆ ಮನೆಯೊಳಗಿದ್ದ ವಸ್ತುಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.
ಬೆAಕಿ ಅವಘಡದ ಬಗ್ಗೆ ಸ್ಥಳೀಯರು ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪ್ರಬಾರ ಅಗ್ನಿಶಾಮಕ ಠಾಣಾಧಿಕಾರಿ ನಾಗೇಶ್, ಚಾಲಕ ಮಂಜುನಾಥ್, ಅಗ್ನಿ ಶಾಮಕರಾದ ಚೇತನ್ಕುಮಾರ್, ಪ್ರಶಾಂತ್ ಹಂಚಿನಾಳ ಅವರುಗಳು ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸಿದ್ದಾರೆ.
ಘಟನಾ ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.