ಮಡಿಕೇರಿ, ಜೂ. ೨೧: ಸುಂಟಿಕೊಪ್ಪದ ಸೌಮ್ಯಶ್ರಿ ಕೆ. ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ದೊರಕಿದೆ. ಮಂಗಳೂರು ವಿ.ವಿ.ಯ ಅನ್ವಯಿಕ ಸಸ್ಯಶಾಸ್ತç ವಿಭಾಗದ ಪ್ರೊ. ರಾಜು ಕೃಷ್ಣ ಚಲನ್ನಾವರ್ ಮಾರ್ಗದರ್ಶನದಲ್ಲಿ ಸೌಮ್ಯಶ್ರೀ ಮಂಡಿಸಿದ ‘ಔಷಧೀಯ ಸಸ್ಯಗಳ ಸಾರಗಳಿಂದ ಸಂಭಾವ್ಯ ನೈಸರ್ಗಿಕ ಜೈವಿಕ ಸಕ್ರಿಯ ಸಂಯುಕ್ತಗಳ ತಪಾಸಣೆ ಮತ್ತು ಮಲೇರಿಯಾ ಹರಡುವ ಸೊಳ್ಳೆಗಳ ಮೇಲೆ ಅವುಗಳ ಪರಿಣಾಮ’ ಎಂಬ ವಿಚಾರದ ಪ್ರಬಂಧಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯದ ೪೨ನೇ ಘಟಿಕೋತ್ಸವದಲ್ಲಿ ಪಿ.ಎಚ್.ಡಿ. ಪದವಿ ದೊರೆತಿದೆ. ಡಾ. ಸೌಮ್ಯಶ್ರೀ ಸುಂಟಿಕೊಪ್ಪದ ನಿಖಿಲ್ ಭಟ್ ಅವರ ಪತ್ನಿ.