ಮಡಿಕೇರಿ, ಜೂ. ೨೧: ಮೂರ್ನಾಡಿನ ಜ್ಞಾನಜ್ಯೋತಿ ಶಾಲಾ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಾಹಿತಿ ನಾಗೇಶ್ ಕಾಲೂರು ಆಗಮಿಸಿದ್ದರು. ಶಾಲೆಯ ಅಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ, ನಿರ್ದೇಶಕರಾದ ಮ್ಯಾಥ್ಯು, ಶೀಲಾ ಅಬ್ದುಲ್ಲ, ಶಾಲಾ ಮುಖ್ಯೋಪಾಧ್ಯಾಯಿನಿ ಶಿಲ್ಪ ಪೊನ್ನಮ್ಮ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ ಶಿಲ್ಪ ಪ್ರಮಾಣ ವಚನ ಬೋಧಿಸಿದರು.

ಶಾಲಾ ನಾಯಕಿಯಾಗಿ ಪಿ.ವಿ. ಜೀವಿತ, ಉಪನಾಯಕಿಯಾಗಿ ಎ.ಬಿ. ಕೃತಿಕ, ಶಿಸ್ತುಪಾಲನಾ ನಾಯಕಿಯಾಗಿ ಸುದೀಕ್ಷ ಗಣಪತಿ, ಉಪನಾಯಕಿ ಭೂಮಿಕ ಭಟ್, ಸಾಂಸ್ಕೃತಿಕ ಸಮಿತಿ ನಾಯಕಿ ನಮೃತ ಮತ್ತು ಉಪನಾಯಕಿ ಬಿಯಾಂಕ, ಕ್ರೀಡಾ ನಾಯಕ ರುಬೇಸ್ ಹಾಗೂ ಉಪನಾಯಕಿ ಚರಿಷ್ಮ, ವಾರ್ತಾ ನಾಯಕಿ ಫಾತಿಮ ಹಾಗೂ ಉಪನಾಯಕ ರಂಜಿತ್ ರೈ, ಆರೋಗ್ಯ ಸಮಿತಿ ನಾಯಕಿ ತನಿಷ್ಕ ಹಾಗೂ ಉಪನಾಯಕ ಅಫ್ರೀದ ಆಯ್ಕೆಗೊಂಡರು.

ಕಾರ್ಯಕ್ರಮದ ಮಾರ್ಗ ದರ್ಶಕರಾಗಿ ಸಮಾಜ ವಿಜ್ಞಾನ ಶಿಕ್ಷಕಿ ಶೋಭ ಹಾಗೂ ಹಿಂದಿ ಶಿಕ್ಷಕಿ ಶಾಲಿನಿ, ವಿಜ್ಞಾನ ಶಿಕ್ಷಕಿ ಪ್ರೀತಿಕ ಕಾರ್ಯನಿರ್ವಹಿಸಿದರು.