ಚೆಯ್ಯಂಡಾಣೆ, ಜೂ. ೨೧: ಚೆಯ್ಯಂಡಾಣೆ ಸಮೀಪದ ಕೋಕೇರಿ ಗ್ರಾಮದ ದವಸ ಭಂಡಾರಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಚೇನಂಡ ಗಿರೀಶ್ ಪೂಣಚ್ಚ, ಉಪಾಧ್ಯಕ್ಷರಾಗಿ ಚೆರುವಾಳಂಡ ಲವೀನ್ ಹಾಗೂ ನಿರ್ದೇಶಕರಾಗಿ ಮಚ್ಚಂಡ ಸಾಬು ಮೇದಪ್ಪ, ಕುಮ್ಮಾಂಡ ರಾಜೇಶ್ ಉತ್ತಯ್ಯ, ಚೇನಂಡ ನಂದ ಜಗದೀಶ್, ಬಿದ್ದಂಡ ರವಿ ತಿಮ್ಮಯ್ಯ, ಮೂಡೇರ ಪ್ರವೀಣ್, ಪೊನ್ನಚ್ಚಂಡ ಅರುಣ್ ಮುದ್ದಪ್ಪ, ಬಿದ್ದಂಡ ರೋಹಿಣಿ, ಪೆಮ್ಮಂಡ ಗೌರಮ್ಮ ಅವರು ಆಯ್ಕೆಯಾದರು.