ಮಡಿಕೇರಿ, ಜೂ. ೨೧: ಭಾಗಮಂಡಲದ ಕೆವಿಜಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕಲಿತ ಮೆಕ್ಯಾನಿಕ್ ಮೋಟಾರ್ ವೆಹಿಕಲ್ ವೃತ್ತಿ ವಿಭಾಗದ ಹಳೆ ವಿದ್ಯಾರ್ಥಿಗಳು ಸಂಸ್ಥೆಗೆ ಕೊಡುಗೆಯಾಗಿ ನೀಡಿದ ಸ್ಮಾರ್ಟ್ಕ್ಲಾಸ್ ತಾ. ೧೫ ರಂದು ಉದ್ಘಾಟನೆಗೊಂಡಿತು.

ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಕಮಿಟಿ ಬಿ ಇದರ ಅಧ್ಯಕ್ಷ ಡಾ. ರೇಣುಕ ಪ್ರಸಾದ್ ಕೆ.ವಿ. ಸ್ಮಾರ್ಟ್ಕ್ಲಾಸಿಗೆ ಚಾಲನೆ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿ ವಿ.ಟಿ.ಯು. ಬೆಳಗಾಮಿನ ಎಕ್ಸಿಕ್ಯೂಟಿವ್ ಕೌನ್ಸಿಲ್ ಮೆಂಬರ್ ಮತ್ತು ಕೆವಿಜಿ ಐಟಿಐ ಭಾಗಮಂಡಲದ ಸಿಇಓ ಡಾ. ಉಜ್ವಲ್ ಯು.ಜೆ. ಅವರು ಸ್ಮಾರ್ಟ್ಕ್ಲಾಸಿನ ಮಹತ್ವ, ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ, ಕಳೆದ ಹಲವು ವರ್ಷಗಳಿಂದ ಉತ್ತಮ ಫಲಿತಾಂಶವನ್ನು ತರುತ್ತಿರುವಂತಹ ಸಂಸ್ಥೆಯ ಬೆಳವಣಿಗೆಗೆ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಆಡಳಿತ ಮಂಡಳಿಯ ಕೊಡುಗೆ ಮತ್ತು ಸಹಕಾರದ ಬಗ್ಗೆ ಮಾತನಾಡಿದರು.

ಈ ಸಂದರ್ಭ ಈ ಸಂಸ್ಥೆಯಲ್ಲಿ ಕಲಿತ ಹಳೆ ವಿದ್ಯಾರ್ಥಿ ಪ್ರಸ್ತುತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉದ್ಯೋಗಿಯಾಗಿರುವ ಲಕ್ಷಿö್ಮÃಶ ಅವರನ್ನು ಸನ್ಮಾನಿಸಲಾಯಿತು. ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಶ್ರೀಕಾಂತ್ ಕೆ.ವಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿನೋದ್ ಸಿ.ಕೆ. ಸ್ವಾಗತಿಸಿದರು ಮತ್ತು ಕಿರಿಯ ತರಬೇತಿ ಅಧಿಕಾರಿ ಪುನೀತ್ ಕಾರ್ಯಕ್ರಮ ನಿರ್ವಹಿಸಿದರು.