ಚೆಯ್ಯAಡಾಣೆ, ಜೂ. ೨೦: ನಾಯಿ ಕಾಣೆಯಾಗಿರುವ ಬಗ್ಗೆ ಜಾಹೀರಾತನ್ನು ಗಮನಿಸಿ ವ್ಯಕ್ತಿಯೊಬ್ಬರು ಮಾಲೀಕರಿಗೆ ಅದನ್ನು ಒಪ್ಪಿಸಿದ ಘಟನೆ ನಡೆದಿದೆ. ಕೋಡಿರ ದಿವ್ಯ ನಾಣಯ್ಯ ಎಂಬವರಿಗೆ ಸೇರಿದ ನ್ಯಾಬ್ರಡಾರ್ ಜಾತಿಯ ಕಪ್ಪು ನಾಯಿ ಒಂದು ವಾರದ ಹಿಂದೆ ಕರಡದಿಂದ ಕಾಣೆಯಾಗಿತ್ತು. ಈ ಬಗ್ಗೆ ತಾ. ೨೦ರಂದು ‘ಶಕ್ತಿ’ಯಲ್ಲಿ ಜಾಹೀರಾತು ಪ್ರಕಟಗೊಂಡಿತ್ತು. ಈ ನಡುವೆ ಆ ನಾಯಿಯು ನರಿಯಂದಡ ಕೇಂದ್ರ ಪ್ರೌಢಶಾಲೆಯ ಸಮೀಪವಿರುವ ಉತ್ತಯ್ಯ ಎಂಬವರ ಮನೆಯ ಬಳಿ ಕಂಡುಬAದಿದ್ದು ಇದನ್ನು ಕಂಡ ಉತ್ತಯ್ಯ ಅವರು ಪತ್ರಿಕೆಯಲ್ಲಿನ ಜಾಹೀರಾತು ಗಮನಿಸಿ ದಿವ್ಯ ನಾಣಯ್ಯ ಅವರಿಗೆ ನಾಯಿಯನ್ನು ಒಪ್ಪಿಸಿದ್ದಾರೆ.