ಕೂಡಿಗೆ, ಜೂ. ೨೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಸುತ್ತಮುತ್ತಲಿನ ಉಪ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಯಡವನಾಡು ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದಿರುವ ಕಾಡಾನೆಗಳು ರೈತರ ಜಮೀನಿಗೆ ದಾಳಿ ಮಾಡಿ ಬೆಳೆಗಳನ್ನು ತುಳಿದು, ತಿಂದು ನಷ್ಟ ಪಡಿಸಿವೆ.
ಹುದುಗೂರು ಗ್ರಾಮದ ಲಕ್ಷ್ಮಿ, ರತ್ನ, ಸ್ವಾಮಿ, ಕಾಳಪ್ಪ, ದೇವೇಂದ್ರ, ಅವರ ಜಮೀನಿನಲ್ಲಿ ಕಾಫಿ, ಬಾಳೆ, ತೆಂಗು ಗಿಡಗಳು, ಶುಂಠಿ ಬೆಳೆಗಳನ್ನು ಹಾನಿಪಡಿಸಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಹುದುಗೂರು ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಮೀಸಲು ಅರಣ್ಯ ಪ್ರದೇಶಗಳಿಗೆ ಓಡಿಸಲು ಮುಂದಾಗಬೇಕೆAದು ಒತ್ತಾಯಿಸಿದ್ದಾರೆ.