ಮಡಿಕೇರಿ, ಜೂ. ೧೯: ಶನಿವಾರಸಂತೆ ರೈತ ಸಂಪರ್ಕ ಕೇಂದ್ರದಲ್ಲಿ ಕಳೆದ ೧೫ ದಿನಗಳ ಹಿಂದಿನಿAದಲೇ ಭತ್ತದ ಬಿತ್ತನೆ ಬೀಜ ಲಭ್ಯವಿದೆ ಎಂದು ಕೃಷಿ ಇಲಾಖೆ ಸ್ಪಷ್ಟನೆ ನೀಡಿದೆ. ತಾ.೧೯ರ ಪತ್ರಿಕೆಯಲ್ಲಿ ಬಿತ್ತನೆ ಬೀಜ ಕೊರತೆ ಎಂದು ಪ್ರಕಟವಾಗಿದ್ದ ವರದಿಗೆ ಇಲಾಖೆಯ ಶನಿವಾರಸಂತೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಈಗಾಗಲೇ ೬.೫ ಕ್ವಿಂಟಾಲ್‌ನಷ್ಟು ಬಿತ್ತನೆ ಬೀಜವನ್ನು ರೈತರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಹಾಗೂ ಪ್ರಸ್ತುತ ಃಖ೨೬೫೫ ತಳಿಯ ೧೫ ಕ್ವಿಂಟಾಲ್, ತನು ತಳಿಯ ೭ ಕ್ವಿಂಟಾಲ್ ಹಾಗೂ ಃheem ೧೧೫ ತಳಿಯ ೧೦.೫ ಕ್ವಿಂಟಾಲ್ ಭತ್ತ ಬಿತ್ತನೆ ಬೀಜ ದಾಸ್ತಾನು ಲಭ್ಯವಿರುವುದಾಗಿ ಅವರು ತಿಳಿಸಿದ್ದಾರೆ.